ವಿಜಯಪುರ : ರಾಷ್ಟ್ರಸೇವೆಗೆ ತನ್ನನ್ನೇ ಸಮರ್ಪಿಸಿಕೊಂಡ ಸಂಸ್ಥೆಯೇ RSS. ಸಂಘ ಹೇಳಿಕೊಡುವುದು ದೇಶಭಕ್ತಿ, ದೇಶ ವಿಭಜನೆಯಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶಕ್ಕೆ ಯಾವುದೇ ವಿಪತ್ತು, ಅಫಘಾತ, ನೆರೆ, ಭೂಕಂಪ, ನೈಸರ್ಗಿಕ ವಿಕೋಪವಾದಾಗ ಮೊದಲು ಸಹಾಯಕ್ಕೆ ಧಾವಿಸುವುದು ರಾಷ್ಟ್ರೀಯ ಸ್ವಯಂ ಸೇವಕದ ಕಾರ್ಯಕರ್ತರು ಎಂದು ತಿಳಿಸಿದ್ದಾರೆ.
ರಾಷ್ಟ್ರ ವಿರೋಧಿಗಳು, ಎಸ್ಡಿಪಿಐ, ಪಿಎಫ್ಐ, ಧಾರ್ಮಿಕ ಕೇಂದ್ರಗಳಿಂದ ದೇಶ ವಿರೋಧಿ ಕೆಲಸಕ್ಕೆ ಪ್ರಚೋದನೆ ನೀಡುವ ಪಟ್ಟಭದ್ರ ಹಿತಾಸಕ್ತಿಗಳನ್ನು ನಿಷೇಧ ಮಾಡಬೇಕು, ಸಂಘವನ್ನಲ್ಲ. ಸಂಘದಲ್ಲಿ ಶಿಕ್ಷಣ ಪಡೆದವರು ಇಂದು ಪ್ರಧಾನಿ, ರಾಷ್ಟ್ರಪತಿಯಲ್ಲದೇ ಅನೇಕ ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ ಎಂದು ಹೇಳಿದ್ದಾರೆ.
ಹಲಾಲ್, ಷರಿಯಾ ನಿಷೇಧ ಮಾಡಬೇಕು
ಸಾರ್ವಜನಿಕ ಜಾಗದಲ್ಲಿ ಶಾಖೆ ನಡೆಸುವುದು ಕಾನೂನುಬಾಹಿರವೇ? ಹಾಗಾದರೆ ಆಂಗ್ಲ, ವಿಜ್ಞಾನ, ಗಣಿತ ಹೇಳಿಕೊಡದೆ, ಈ ಸ್ಪರ್ಧಾತ್ಮಕ ಯುಗದಲ್ಲಿ ಧಾರ್ಮಿಕ ಪಾಠ ಮಾಡುವ ಮದರಸ, ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲದ ಹಲಾಲ್ ವ್ಯವಸ್ಥೆ, ಷರಿಯಾ ಇದನ್ನೂ ಸಹ ನಿಷೇಧ ಮಾಡಬೇಕು ಎಂದು ಕುಟುಕಿದ್ದಾರೆ.
ಸಂಘ ನೀಡಿದ ಶಿಕ್ಷಣ, ಕಲಿಸಿದ ಶಿಸ್ತು, ಸಂಯಮ, ಸಮರ್ಪಣಾ ಭಾವ, ಬದ್ದತೆಯೇ ಕಾರಣ ಹಲವು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿದ್ದಾರೆ ಎಂದು ಶಾಸಕ ಯತ್ನಾಳ್ ಪೋಸ್ಟ್ ಮಾಡಿದ್ದಾರೆ.
ಸಾರ್ವಜನಿಕ ಜಾಗದಲ್ಲಿ ಶಾಖೆ ನಡೆಸುವುದು ಕಾನೂನುಬಾಹಿರವಾದರೆ, ಆಂಗ್ಲ, ವಿಜ್ಞಾನ, ಗಣಿತ ಹೇಳಿಕೊಡದೆ, ಈ ಸ್ಪರ್ಧಾತ್ಮಕ ಯುಗದಲ್ಲಿ ಧಾರ್ಮಿಕ ಪಾಠ ಮಾಡುವ ಮದರಸ, ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲದ ಹಲಾಲ್ ವ್ಯವಸ್ಥೆ, ಷರಿಯಾ ಇದನ್ನೂ ಸಹ ನಿಷೇದ ಮಾಡಬೇಕು.
— Basanagouda R Patil (Yatnal) (@BasanagoudaBJP) February 7, 2024