Wednesday, October 30, 2024

ಸಿದ್ದರಾಮಯ್ಯ ಸರ್ಕಾರ ಬದುಕಿರುತ್ತಾ..? : ಶಾಸಕ ಚನ್ನಬಸಪ್ಪ ಕೆಂಡ

ಶಿವಮೊಗ್ಗ : ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಪೊಲೀಸರು ಹನುಮಧ್ವಜ ತೆರವುಗೊಳಿಸಿರುವುದಕ್ಕೆ ಶಾಸಕ ಎಸ್.ಎನ್‌ ಚನ್ನಬಸಪ್ಪ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ನಾಯಕರು ಆಂಜನೇಯನ್ನು ಮುಟ್ಟಿದ್ದಾರೆ. ಸಿದ್ದರಾಮಯ್ಯರ ಸರ್ಕಾರ ಬದುಕಿರುತ್ತಾ..? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಕಟ್ಟಿರುವವರು ನಾವು. ಹನುಮ ಹುಟ್ಟಿದ್ದೇ ಕರ್ನಾಟಕದಲ್ಲಿ, ಇದನ್ನು ಈ ಕಾಂಗ್ರೆಸ್​ ಸರ್ಕಾರ ಮರೆಯಬಾರದು. ಅವರಪ್ಪನದಾ ಈ ಸರ್ಕಾರ, ನಾವು ಕೇಳಬೇಕಲ್ವಾ..? ಸರ್ಕಾರಿ ಧ್ವಜ ಸ್ತಂಭದಲ್ಲಿ ಹಾಕದೆ ಮತ್ತೆಲ್ಲಿ ಹಾಕಬೇಕು..? ಕೇಸರಿ ಧ್ವಜ ಕಾಣಬಾರದು ಅಲ್ವ ನಿಮಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಮ್ಮೆ ಹನುಮಧ್ವಜ ಹಾರಿಸಬೇಕು

ರಾಜ್ಯದಲ್ಲಿ ಬೇರೆ ಧ್ವಜ ಹಾರಿಸಬಹುದಾ..? ಕಾಂಗ್ರೆಸ್ ಪಕ್ಷ ಇದಕ್ಕೆ ಬೆಲೆ ತೆರಬೇಕಾಗುತ್ತೆ. ಹಿಂದೂ ಸಮಾಜ ಈ ಧೋರಣೆಯನ್ನು ಸಹಿಸುವುದಿಲ್ಲ. ಜಂಡಾ ಕಟ್ಟೆಗಳಲ್ಲಿ ಜಂಡಾಗಳು ಇದಾವೇ ಈ ಬಗ್ಗೆಯು ಗಮನ ಹರಿಸಬೇಕಾಗುತ್ತೆ. ಮತ್ತೊಮ್ಮೆ ಹನುಮನ ಧ್ವಜವನ್ನು ಅದೇ ಸ್ಥಳದಲ್ಲಿ ಹಾರಿಸಬೇಕು ಎಂದು ಶಾಸಕ ಚನ್ನಬಸಪ್ಪ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES