Friday, January 3, 2025

ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧನ ರಕ್ಷಣೆ!

ತುಮಕೂರು: ತೀತಾ ಜಲಾಶಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧನನ್ನು ಪ್ರವಾಸಿಗರು ಸಮಯಪ್ರಜ್ಞೆಯಿಂದ ಜಲಾಶಯಕ್ಕೆ ಧುಮುಕಿ ವೃದ್ಧನನ್ನ ರಕ್ಷಣೆ ಮಾಡಿದ್ದಾರೆ. ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿರುವ ತೀತಾ ಜಲಾಶಯದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಸರ್ಕಾರ ಹನುಮಧ್ವಜ ತೆರವು ಮಾಡಿ, ಓಲೈಕೆ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಚಿದಾನಂದ್ ಗೊರವನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಅಕ್ಕ-ಪಕ್ಕ ಯಾರು ಇಲ್ಲದನ್ನು ಗಮನಿಸಿ ತೀತಾ ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ವೃದ್ಧ ಯತ್ನಿಸಿದ್ದರು. ಇದನ್ನ ಗಮಿಸಿದ ಪ್ರವಾಸಿಗ ಫಕ್ರುದ್ದೀನ್ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ಧಾನೆ. ಫಕ್ರುದ್ದೀನ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ವೃದ್ದ ಚಿದಾನಂದ್​ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ಕಾರಣವೇನು ಎನ್ನುವುದು ಇನ್ನು ತಿಳಿದುಬಂದಿಲ್ಲ.

RELATED ARTICLES

Related Articles

TRENDING ARTICLES