ಪಶ್ಚಿಮ ಬಂಗಾಳ: ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ದಿನಕ್ಕೊಂದು ಕಂಟಕ ಉಂಟಾಗಿದೆ. ಅಸ್ಸಾಂನಲ್ಲಿ ಈ ಯಾತ್ರೆಯನ್ನು ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗಿಲ್ಲ.
ಇದೀಗ ಅಸ್ಸಾಂನಿಂದ ಪಶ್ಚಿಮ ಬಂಗಾಳಕ್ಕೆ ನ್ಯಾಯ್ ಯಾತ್ರೆ ಬಂದಿದೆ. ಅಲ್ಲಿಯೂ ಸಮಸ್ಯೆ ಎದುರಾಗಿದೆ. ಯಾತ್ರೆಯ ಎರಡನೇ ದಿನ ನಡೆಸಬೇಕಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: Kevin sinclair: ವೆಸ್ಟ್ ಇಂಡೀಸ್ ಬೌಲರ್ನ ಸೆಲೆಬ್ರೆಷನ್ ವಿಡಿಯೊ ಫುಲ್ ವೈರಲ್
ಈ ಸಭೆಗೆ ಅಲ್ಲಿನ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಲಿಗುರಿಯಲ್ಲಿ ರಾಹುಲ್ ಗಾಂಧಿ ಅವರು ಎರಡು ಸಭೆಗಳನ್ನು ನಡೆಸಬೇಕಿತ್ತು. ಆದರೆ ಪಶ್ಚಿಮ ಬಂಗಾಳ ಪೊಲೀಸರು, ಪೊಲೀಸ್ ಪರೀಕ್ಷೆ ನಡೆಯುತ್ತಿದೆ, ಆ ಕಾರಣಕ್ಕೆ ಸಭೆಗೆ ಅವಕಾಶವಿಲ್ಲ ಎಂದಿದ್ದಾರೆ. ಇದರಿಂದ ಸಭೆ ರದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಹೇಳಿದ್ದಾರೆ. ಇದರೊಂದಿಗೆ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಗೆ ಬೆಂಬಲವಿಲ್ಲದಂತಾಗಿದೆ.