ಬೆಂಗಳೂರು : ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು ಪೊಲೀಸರ ಬಿಗಿ ಭದ್ರತೆಯನ್ನು ಭೇದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ ನುಗ್ಗಿದ ಘಟನೆ ನಡೆದಿದೆ.
ಏಕಾಏಕಿಯಾಗಿ ಸಿಎಂ ಬಳಿಗೆ ನುಗ್ಗಲು ಯತ್ನಿಸಿದವರು ಮೈಸೂರು ಮೂಲದ ಪರಶು ರಾಮ್ ಎಂದು ತಿಳಿದುಬಂದಿದೆ. ಬಹಳ ದಿನಗಳಿಂದ ಅವರಿಗೆ ಸಿಎಂ ಬಳಿ ಒಂದು ವಿಷಯವನ್ನು ಹೇಳಿ ಸಹಾಯ ಮಾಡಿ ಎಂದು ಕೇಳಲು ಬಂದಿದ್ದರು.
ಇದನ್ನೂ ಓದಿ: ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕಾಪಾಡಲು ನಾವು ಒಗ್ಗಟ್ಟಾಗಿರಬೇಕು: ಮಲ್ಲಿಕಾರ್ಜುನ ಖರ್ಗೆ
ಪರಶುರಾಮ್ ಅವರು ಸಿಎಂ ಬಳಿ ಕೊಡಲುದ್ದೇಶಿಸಿದ್ದ ಮನವಿಯಲ್ಲಿ ಅವರ ಅಳಿಯನಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಆಗಿದೆ. ಆದರೆ, ಇನ್ನೂ ನೇಮಕಾತಿ ಆದೇಶ ಬಂದಿಲ್ಲ. ಅದನ್ನು ಆದಷ್ಟು ಬೇಗನೆ ಮಾಡಬೇಕು ಎಂದು ಆಗ್ರಹಿಸುವುದಕ್ಕಾಗಿ ಅವರು ಅಲ್ಲಿ ಬಂದಿದ್ದರು.
ಕೆಪಿಎಸ್‌ಸಿ ನೇಮಕಾತಿ ಆದೇಶ ಮಾಡಲು ವಿಳಂಬ ಮಾಡುತ್ತಿರುವುದನ್ನು ಆಕ್ಷೇಪಿಸಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವರು ಬಂದಿದ್ದರು. ಆದರೆ ಸಿಎಂ ಬಳಿ ಪೊಲೀಸರು ಬಿಡದಿದ್ದಾಗ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದರು. ಪೊಲೀಸರು ಈಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ.
ಕೂಡಲೇ ಪೊಲೀಸರು ಆತನನ್ನು ಪಡೆದು ವಿಚಾರಣೆ ನಡೆಸಿದರು. ಸಿಎಂ ಗಮನ ಸೆಳೆಯಲು ಈ ರೀತಿ ಮಾಡಿದ್ದಾನೆ. ತನ್ನ ಕೈಯಲ್ಲಿ ಪತ್ರವೊಂದನ್ನು ಹಿಡಿದಿದ್ದ ಆತ ಅದನ್ನು ಸಿಎಂ ಕಡೆಗೆ ಎಸೆಯಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಕೂಡಲೇ ಅಪಾಯವನ್ನು ಗ್ರಹಿಸಿ ಅವನನ್ನು ಹಿಡಿದುಕೊಂಡರು.