ಬೆಂಗಳೂರು : ನಾನು ಎಂದೂ ಸಿಎಂ ಸಿದ್ದರಾಮಯ್ಯರ ಹೆಸರೇಳಿ, ಅವರ ವಿರುದ್ಧ ಮಾತನಾಡಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ..? ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕುಟುಕಿದ್ದಾರೆ.
ಸಿಸಿಬಿ ಪೊಲೀಸರ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಟ್ಟಿದ್ದರು. ವಿಚಾರಣೆ ಮಾಡಿ ತಿಳಿಸಿ ಎಂದು ರಾಜ್ಯಪಾಲರು ಹೇಳಿರಬೇಕು. ಇಷ್ಟೊಂದು ಕ್ರಿಪ್ಷವಾಗಿ ಇದು ಬಂದಿದೆ. ಎಲ್ಲಾ ಪ್ರಕರಣಗಳು ಹೀಗೆ ಆದರೆ ಉತ್ತಮ. ಆದರೆ, ನಮಗೆ ಮಾತ್ರ ಹೀಗೆ ಅಂದ್ರೆ ಉತ್ತರ ಹುಡುಕಬೇಕಾಗುತ್ತದೆ ಎಂದು ಬೇಸರಿಸಿದ್ದಾರೆ.
ರಾಜ್ಯಪಾಲರು ಸಂವಿಧಾನದ ಒಂದು ಅಂಗ ಇದ್ದಂತೆ. ನಾನು ಪರಿಷತ್ ಸದಸ್ಯ, ಸ್ಪೀಕರ್ ಅವರ ಅನುಮತಿ ತೆಗೆದುಕೊಳ್ಳಬೇಕಿತ್ತು. ಶಿಷ್ಟಾಚಾರದ ಉಲ್ಲಂಘನೆ ಕೂಡ ಆಗಿದೆ. ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತಂದಿದ್ದೇವೆ ಅಂತ ಪೊಲೀಸರು ಹೇಳಿದ್ದಾರೆ. ಆದರೆ, ಇದು ಗೃಹ ಸಚಿವರ ಗಮನಕ್ಕೆ ಇಲ್ಲ ಅನಿಸುತ್ತದೆ ಎಂದು ಹೇಳಿದ್ದಾರೆ.
ಕಾಂತರಾಜ್ ವರದಿ ಏನಿದೆ? ಏನಿಲ್ಲ?
ಒಳ ಮೀಸಲಾತಿ ವಿಚಾರ ಹಲವಾರು ವರ್ಷಗಳಿಂದಲೂ ಇದೆ. ದೆಹಲಿಯಲ್ಲಿ ರೋಹಿಣಿ ಕಮಿಷನ್ ಅಂತಲೂ ಮಾಡಿದ್ದಾರೆ. ಸರ್ಕಾರ ತೀರ್ಮಾನ ಇವಾಗ ತೆಗೆದುಕೊಂಡಿದೆ. ಹಿಂದೆ ಬಿಜೆಪಿ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಕಳಿಸಿದ್ರು, ಆಗ ಅವರು ಗೊತ್ತಿಲ್ಲ ಅಂದ್ರು. ಆದರೆ, ಏನೇ ಆಗಬೇಕು ಅಂದರೆ ಸಂಸತ್ತಿಗೆ ಬರಬೇಕು. ಕಾಂತರಾಜ್ ವರದಿ ಏನಿದೆ? ಏನಿಲ್ಲ? ಅನ್ನೋದು ಗೊತ್ತಿಲ್ಲ. ವರದಿಯಲ್ಲಿ ಏನಿದೆ ಅಂತ ಬಹಿರಂಗ ಗೊಳಿಸಬೇಕು. ಒಳ್ಳೆಯದು ಕೆಟ್ಟದು ಏನಿದೆ ಅಂತ ಗೊತ್ತಾಗಬೇಕು ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.