Monday, December 23, 2024

ಶ್ರೀರಾಮನ ಪ್ಲೆಕ್ಸ್​​ನ್ನು ಬ್ಲೇಡ್​​ನಿಂದ ಹರಿದ ದುಷ್ಕರ್ಮಿಗಳು!

ಕೋಲಾರ: ಶ್ರೀರಾಮನ ಕಟೌಟ್ ಹಾಗೂ ಪ್ಲೆಕ್ಸ್​ ಅನ್ನು ದುಷ್ಕರ್ಮಿಗಳು ಬ್ಲೇಡ್​​ನಿಂದ ಹರಿದಿರುವ ಘಟನೆ ಕೋಲಾರದ ಮುಳಬಾಗಿಲು ನಗರದ ಗುಣಗಂಟೆಪಾಳ್ಯದಲ್ಲಿ ನಡೆದಿದೆ.

ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​​ ಮತ್ತು ಪುತ್ರ ಅಯೋಧ್ಯೆ ಧ್ರುವ ಚಾರಿಟಬಲ್​​ ಟ್ರಸ್ಟ್​​ ವತಿಯಿಂದ ನಗರದಲ್ಲಿ ರಾಮನ ಶೋಭಾಯಾತ್ರೆ, ಸೀತರಾಮ ಕಲ್ಯಾಣೋತ್ಸವ ಮತ್ತು ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಂಕ 21 ಮತ್ತು 22 ರಂದು ಎರಡು ದಿನ ಈ ಕಾರ್ಯಕ್ರಮಗಳು ನಡೆಯಲಿದ್ದವು. ಹೀಗಾಗಿ ನಗರದಲ್ಲಿ ಬ್ಯಾನರ್​ ಮತ್ತು ಶ್ರೀರಾಮ ಕಟೌಟ್​ ನಿಲ್ಲಿಸಲಾಗಿತ್ತು.

ಇದನ್ನೂ ಓದಿ: ಅಯೋಧ್ಯೆ: ರಾಮ ಲಲ್ಲಾ ಪ್ರತಿಷ್ಠಾಪನೆ ನಿಷೇಧಿಸುವಂತೆ ಕೋರಿ ಕೊರ್ಟ್​ಗೆ ಅರ್ಜಿ!

ಈ ಬ್ಯಾನರ್​ ಮತ್ತು ಕಟ್​ಔಟ್​​ಗಳನ್ನು ಕಳೆದ ರಾತ್ರಿ 10.44ರ ಸುಮಾರಿಗೆ ಯಾರೋ ದುಷ್ಕರ್ಮಿಗಳು ಬ್ಲೇಡ್​ನಿಂದ ಹರಿದು ಹಾಕಿದ್ದಾರೆ. ಶ್ರೀರಾಮನ ಕಟೌಟ್​ನ್ನು ಹರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES