Tuesday, December 24, 2024

ಈ ಗ್ರಾಮಕ್ಕೆ ಸಂ‘ಕ್ರಾಂತಿ’ ಅಂದ್ರೆ ಭಯ : ನೂರಾರು ವರ್ಷಗಳಿಂದ ಇಲ್ಲಿ ಸಂಕ್ರಾಂತಿ ನಿಷಿದ್ಧ!

ಕೋಲಾರ : ಇದೇನು ನಂಬಿಕೆಯೋ ಮೂಢನಂಬಿಕೆಯೋ ಗೊತ್ತಿಲ್ಲ. ಜನವರಿ 15 ಬಂತಂದ್ರೆ ಸಾಕು, ಇಡೀ ದೇಶಕ್ಕೆ ದೇಶವೇ ಸಂಕ್ರಾಂತಿ ಸಂಭ್ರಮದಲ್ಲಿ ತೇಲುತ್ತೆ. ಆದರೆ, ಚಿನ್ನದ ನಾಡು ಕೋಲಾರ ಜಿಲ್ಲೆಯ ಆ ಹಳ್ಳಿಯೊಂದರಲ್ಲಿ ಮಾತ್ರ ಸಂಕ್ರಾಂತಿ ಆಚರಣೆ ಮಾಡಲ್ಲ. ಸಂಕ್ರಾಂತಿ ಅಂದ್ರೆ ಸಾಕು ಊರಿಗೇ ಊರೇ ಶಾಕ್ ಆಗುತ್ತೆ.

ಇದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಎಂಬ ಗ್ರಾಮ. ಹೆಚ್ಚುಕಮ್ಮಿ ಜಿಲ್ಲಾಕೇಂದ್ರಕ್ಕೆ ಸಮೀಪವೇ ಇದೆ. ಈ ಊರಲ್ಲಿ ಹತ್ತತ್ತಿರ ಒಂದು ಸಾವಿರ ಮಂದಿ ವಾಸವಿದ್ದಾರೆ. ವಿದ್ಯಾವಂತರೂ ಇದ್ದಾರೆ, ನೌಕರಿಯಲ್ಲಿರೋರು ಇದ್ದಾರೆ. ಆದರೆ, ಅದ್ಯಾಕೋ ಈ ಊರಲ್ಲಿ ನಂಬಿಕೆನೋ ಮೂಢನಂಬಿಕೆನೋ ಗೊತ್ತಿಲ್ಲ. ಸಂಕ್ರಾಂತಿ ಮಾತ್ರ ನಿಷಿದ್ಧ.

500 ವರ್ಷಗಳ ಹಿಂದೆ ಈ ಊರಲ್ಲಿ ಅದ್ದೂರಿ ಸಂಕ್ರಾಂತಿ ಮಾಡಲಾಗಿತ್ತು. ಅದೊಂದು ವರ್ಷ ಊರಿಂದಾಚೆ ಹಾಕಿದ್ದ ಕಿಚ್ಚು ದಾಟಿಕೊಂಡು ಬರಬೇಕಿದ್ದ ಹಸುಗಳು ನಾಪತ್ತೆಯಾಗಿದ್ವು. ಅದರ ಮುಂದಿನ ವರ್ಷ ಸಂಕ್ರಾಂತಿ ಆಚರಿಸಿದಾಗ ದನ-ಕರುಗಳು ಕಾಯಿಲೆಯಿಂದ ಜೀವ ಬಿಟ್ಟಿದ್ವಂತೆ. ಊರವರು ಇನ್ಮುಂದೆ ಸಂಕ್ರಾಂತಿ ಬದಲು ಬಸವಜಯಂತಿ ದಿನ ದನಗಳ ಹಬ್ಬ ಮಾಡ್ತೀವಿ ಅಂತ ಹರಕೆ ಹೊತ್ತರಂತೆ. ಆಗ ಜಾನುವಾರುಗಳ ಸಾವಿನ ಸರಣಿ ನಿಂತಿತ್ತಂತೆ. ಅಂದಿನಿಂದಲೂ ಈ ಊರಲ್ಲಿ ಸಂಕ್ರಾಂತಿ ಮಾಡಲ್ಲ.

ಊರಲ್ಲಿ ಹಬ್ಬದ ಸಂಭ್ರಮವಿರಲ್ಲ

ಸಂಕ್ರಾಂತಿ ದಿನ ಅರಾಬಿಕೊತ್ತನೂರು ಗ್ರಾಮಕ್ಕೆ ಸೂತಕದ ದಿನ. ಊರಲ್ಲಿ ಹಬ್ಬದ ಸಂಭ್ರಮವಿರಲ್ಲ. ಜನ ಮತ್ತು ಜಾನುವಾರಗಳು ಸಿಂಗಾರ ಮಾಡಲ್ಲ. ಒಟ್ನಲ್ಲಿ, ಕಾಲ ಅದೆಷ್ಟೇ ಮುಂದುವರೆಯಲಿ ಕೆಲವೊಂದು ವಿಚಾರಗಳು ವಿಜ್ಞಾನಕ್ಕೂ ನಿಲುಕಲ್ಲ. ನಾಡಿಗೆಲ್ಲಾ ಸಂಕ್ರಾಂತಿ ಖುಷಿ ಆದರೆ, ಈ ಊರಲ್ಲಿ ಮಾತ್ರ ಸುಗ್ಗಿನೂ ಇಲ್ಲ, ಸಂಕ್ರಾಂತಿನೂ ಇಲ್ಲ ಅನ್ನೋದೇ ವಿಶೇಷ.

RELATED ARTICLES

Related Articles

TRENDING ARTICLES