Friday, November 22, 2024

ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ : 2-0ರಿಂದ ಸರಣಿ ಗೆದ್ದು ಬೀಗಿದ ಭಾರತ

ಬೆಂಗಳೂರು : ಶಿವಂ ದುಬೆ ತೂಫಾನ್ ಬ್ಯಾಟಿಂಗ್.. ಯಶಸ್ವಿ ಜೈಸ್ವಾಲ್ ಜವಾಬ್ದಾರಿಯುತ ಆಟ.. ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಗೆದ್ದು ಬೀಗಿದ ಭಾರತ.

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 20 ಓವರ್​ಗಳಲ್ಲಿ 173 ರನ್​ ಸಿಡಿಸಿತು. ಅಫ್ಘಾನ್​ ನೀಡಿದ 173 ರನ್​ಗಳ ಕಠೀಣ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಕ್ಲೀನ್​ ಬೌಡ್​ ಆಗಿ ಶೂನ್ಯಕ್ಕೆ ನಿರ್ಗಮಿಸಿದರು.

ಬಳಿಕ, ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಜೊತೆಗೂಡಿ ಜವಾಬ್ದಾರಿಯುವ ಆಟ ಪ್ರದರ್ಶಿಸಿದರು. ಈ ಜೋಡಿ 50 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿತು. ಕೊಹ್ಲಿ 16 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 29 ರನ್​ ಗಳಿಸಿ ನವೀನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಇಂದೋರ್​ ಮೈದಾನದಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಯಾಯಿತು.

ಜೈಸ್ವಾಲ್ ಜೊತೆಗೂಡಿದ ಆಲ್​ರೌಂಡರ್​ ಶಿವಂ ದುಬೆ ಅಫ್ಘಾನ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಇಬ್ಬರು ದಾಂಡಿಗರು ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್​ ಸಿಡಿಸಿದರು. ಯಶಸ್ವಿ ಜೈಸ್ವಾಲ್ 34 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅರ್ಧ ಶತಕ (68) ಸಿಡಿಸಿ ಔಟಾದರು.

ಶಿವಂ ದುಬೆ ಭರ್ಜರಿ ಅರ್ಧ ಶತಕ

32 ಎಸೆತಗಳನ್ನು ಎದುರಿಸಿದ ಶಿವಂ ದುಬೆ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ (63*) ಅರ್ಧ ಶತಕ ಸಿಡಿಸಿ ಮಿಂಚಿದರು. ಈ ಸರಣಿಯಲ್ಲಿ ದುಬೆ ಅವರ ಎರಡನೇ ಅರ್ಧ ಶತಕ ಇದಾಗಿದೆ. ಭಾರತ ಕೇವಲ 15.4 ಓವರ್​ಗಳಲ್ಲಿ 173 ರನ್​ಗಳ ಗುರಿಯನ್ನು ತಲುಪಿತು. ಉಳಿದಂತೆ ಜಿತೇಶ್​ ಶರ್ಮಾ ಶೂನ್ಯಕ್ಕೆ ಔಟಾದರೆ, ರಿಂಕು ಸಿಂಗ್ ಅಜೇಯ 9 ರನ್​ ಗಳಿಸಿದರು. ಅಫ್ಘಾನ್​ ಪರ ಕರೀಂ 2, ಫಾರೀಕಿ ಹಾಗೂ ನವೀನ್ ತಲಾ ಒಂದು ವಿಕೆಟ್ ಪಡೆದರು. 4 ಓವರ್​ ಬೌಲ್​ ಮಾಡಿ 17 ರನ್​ ನೀಡಿ 2 ವಿಕೆಟ್ ಪಡೆದ ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

RELATED ARTICLES

Related Articles

TRENDING ARTICLES