Tuesday, November 5, 2024

642 ಬಾಲ್​ಗಳಲ್ಲಿ ಟೆಸ್ಟ್ ಅಂತ್ಯ, 3 ಬಾರಿ ಎರಡೇ ದಿನದಲ್ಲಿ ಭಾರತಕ್ಕೆ ಗೆಲುವು

ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಇನ್ನು ಇದೇ ಪಂದ್ಯದಲ್ಲಿ ಐತಿಹಾಸ ದಾಖಲೆಯೊಂದು ನಿರ್ಮಾಣವಾಗಿದೆ.

ಒಂದು ಟೆಸ್ಟ್‌ ಪಂದ್ಯ ಕೇವಲ ಒಂದೂವರೆ ದಿನದಲ್ಲಿ ಅಂತ್ಯಕೊಂಡಿದೆ. ಇದು 147 ವರ್ಷಗಳ ಇತಿಹಾಸವಿರುವ ಕ್ರಿಕೆಟ್‌ ದುನಿಯಾದಲ್ಲಿ ಮತ್ತೊಂದು ರೆಕಾರ್ಡ್‌ ಆಗಿದೆ. ಕೇವಲ 107 ಓವರ್‌ಗಳಿಲ್ಲಿ ಅಂದ್ರೆ 642 ಬಾಲ್‌ಗಳಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯ ಅಂತ್ಯಗೊಂಡಿದೆ.

ಇನ್ನು ಇದಕ್ಕೂ ಮುನ್ನ 1932ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ 656 ಬಾಲ್‌ಗಳಲ್ಲಿ ಮ್ಯಾಚ್‌ ಅಂತ್ಯಗೊಂಡಿತ್ತು. ಇದೀಗ 123 ವರ್ಷಗಳ ಬಳಿಕ ಇತಿಹಾಸ ಮರುಕಳಿಸಿದೆ. ಇನ್ನೂ 2011ರಲ್ಲಿ ಕೊನೆಯ ಬಾರಿ 1-1ರಲ್ಲಿ ಸರಣಿ ಡ್ರಾ ಮಾಡಿಕೊಂಡಿದ್ದ ಭಾರತ ಬಳಿಕ, 2013, 2018, 2021-22ರಲ್ಲಿ ಸರಣಿ ಸೋತಿತ್ತು. ಇದೀಗ (2024) 1-1ರಲ್ಲಿ ಸರಣಿ ಡ್ರಾ ಮಾಡಿಕೊಂಡಿದೆ.

3 ಬಾರಿ ಎರಡೇ ದಿನದಲ್ಲಿ ಟೆಸ್ಟ್ ಪಂದ್ಯ ಗೆಲುವು

ಭಾರತ ತಂಡವು ಟೆಸ್ಟ್​ ಪಂದ್ಯದಲ್ಲಿ ಈವರೆಗೆ ಮೂರು ಬಾರಿ ಎರಡು ದಿನಗಳಲ್ಲಿ ಪಂದ್ಯವನ್ನು ಗೆದ್ದು ಬೀಗಿದೆ.

  • ಭಾರತ vs ಅಫ್ಘಾನಿಸ್ತಾನ (2018), ಬೆಂಗಳೂರು
  • ಭಾರತ vs ಇಂಗ್ಲೆಂಡ್ (2021) ಅಹಮದಾಬಾದ್
  • ಭಾರತ vs ದಕ್ಷಿಣ ಆಫ್ರಿಕಾ (2024) ಕೇಪ್​ಟೌನ್

RELATED ARTICLES

Related Articles

TRENDING ARTICLES