ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಈ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್ ಮುಂತಾದವರು ನಟಿಸಿದ್ದಾರೆ. ತೃಪ್ತಿ ದಿಮ್ರಿ ಮತ್ತು ರಣಬೀರ್ ಕಪೂರ್ ಅವರು ಸಖತ್ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀನ್ಗಳಿಗೆ ಬಾಂಗ್ಲಾದೇಶದ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಅಲ್ಲಿನ ಪ್ರೇಕ್ಷಕರಿಗೆ ಇಂಥ ದೃಶ್ಯಗಳು ಸೂಕ್ತವಲ್ಲವೆಂದು ಸೆನ್ಸಾರ್ ಸದಸ್ಯರು ನಿರ್ಧರಿಸಿದ್ದಾರೆ ಎಂದು ಬಾಲಿವುಡ್ ಹಂಗಾಮಾ ಜಾಲತಾಣ ತಿಳಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು 104 ಜನರಿಗೆ ಕೊರೊನಾ ಸೋಂಕು ದೃಢ
ಭಾರತದಲ್ಲಿ ಅನಿಮಲ್ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ಸಿಕ್ಕಿತ್ತು. ಚಿತ್ರದಲ್ಲಿನ ಕೆಲವು ಹಸಿ-ಬಿಸಿ ದೃಶ್ಯಗಳ ಕ್ಲೋಸಪ್ ಶಾಟ್ಗಳನ್ನು ಡಿಲೀಟ್ ಮಾಡಿದ ಬಳಿಕವೇ ‘ಎ’ ಸರ್ಟಿಫಿಕೇಟ್ ನೀಡಲಾಗಿತ್ತು. ಈ ಸಿನಿಮಾದಲ್ಲಿ ಕೆಟ್ಟ ಭಾಷೆಯ ಜೊತೆಗೆ ಅತಿಯಾದ ಕ್ರೌರ್ಯ ಇದೆ. ಆ ಕಾರಣದಿಂದಲೂ ‘ಅನಿಮಲ್’ ಚಿತ್ರ ಟೀಕೆಗೆ ಒಳಗಾಯಿತು.