ಗದಗ : ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡುವುದಿಲ್ಲ. ನಮ್ಮ ದೇವಸ್ಥಾನಗಳನ್ನು ಹೊಡೆದು ಮಸೀದಿ ಕಟ್ಟಿದ್ದಾರಲ್ಲ.. ಆ ಮಸೀದಿ ಉಳಿಸಲ್ಲ. ಈ ದೇಶದಲ್ಲಿ ಒಂದೇ ಒಂದು ಮಸೀದಿಯನ್ನು ಉಳಿಸೋದಿಲ್ಲ. ಇದು ನನ್ನ ವ್ಯಕ್ತಿಕವಾದ ಅಭಿಪ್ರಾಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶಪಥ ಮಾಡಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಕ್ತವನ್ನು ಹಂಚಿಕೊಂಡವರು ನಾವು. ನಮ್ಮಲ್ಲಿ ಟಿಪ್ಪು ರಕ್ತ ಇಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರ ರಕ್ತ ಇದೆ. ಅಯೋಧ್ಯೆ, ಕಾಶಿ, ಮಧುರಾ ಇಂತಹ ವಿಶೇಷ ದೇವಸ್ಥಾನಗಳನ್ನು ನಾವು ಉಳಿಸುತ್ತೇವೆ ಎಂದು ಹೇಳಿದ್ದಾರೆ.
ಹಿಂದೂ ರಾಷ್ಟ್ರ ಮಾಡೋದು ಬಿಜೆಪಿ ಅಜೆಂಡಾ ಅಲ್ಲ. ಹಿಂದೂ ರಾಷ್ಟ್ರ ಮಾಡೋದು ದೇಶದ ಹಿಂದೂಗಳ ಅಜೆಂಡಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ದೇಶದ ಹಿಂದೂಗಳು ಹಿಂದೂ ರಾಷ್ಟ್ರ ಆಗ್ಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಎನ್ನುವುದು ಇವತ್ತಿನ ತೀರ್ಮಾನ ಅಲ್ಲ. ಸ್ವಾತಂತ್ರ್ಯ ಪೂರ್ವದ ಹೋರಾಟ ಎಂದು ತಿಳಿಸಿದ್ದಾರೆ.
ಮುಸ್ಲಿಮರು ಮಧುರಾ, ಕಾಶಿ ಹೊಡೆದು ಹಾಕಿದ್ರು
ಮಧುರಾ, ಕಾಶಿಯಲ್ಲಿ ಎಲ್ಲವನ್ನೂ ಹೊಡೆದು ಹಾಕಿದ್ರಲ್ಲಾ ಮುಸಲ್ಮಾನರು. ಅದನ್ನೆಲ್ಲಾ ಉಳಿಸಬೇಕೆಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವರ್ಗದಲ್ಲಿ ಇರೋದು. ಅವರೆಲ್ಲ ಆತ್ಮಕ್ಕೆ ಈವಾಗ ಶಾಂತಿ ಸಿಗ್ತಾಯಿದೆಯಲ್ವಾ? ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಇಡೀ ಪ್ರಪಂಚ ನೋಡುವ ಕೆಲಸ ಆಗುತ್ತೆ. ಕಾಶಿ ಕುರಿತು ಕೋರ್ಟ್ ತೀರ್ಪು ಆಗಿದೆ, ಮಧುರಾ ಬಗ್ಗೆ ಸರ್ವೆ ಕೊಟ್ಟಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.