Saturday, November 2, 2024

ಕೇಂದ್ರ ಸರ್ಕಾರದಿಂದ ಕೊರೊನಾ ಗೈಡ್​ಲೈನ್ಸ್​ ಬಿಡುಗಡೆ

ಬೆಂಗಳೂರು : ಕೇರಳ ಸೇರಿದಂತೆ ದೇಶದಲ್ಲಿ ಕೊರೊನಾ ರೂಪಾಂತರಿ ಜೆಎನ್​.1 ಪ್ರಕರಣಗಳಲ್ಲಿ ಹೆಚ್ಚಳ ಹಿನ್ನೆಲೆ ಕೇಂದ್ರ ಸರ್ಕಾರ ಕೊವಿಡ್ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

ಮುಂಬರುವ ಹಬ್ಬಗಳ ಮೇಲೆ ನಿಗಾ ವಹಿಸಬೇಕು, ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್(ರ‍್ಯಾಪಿಡ್ ಆಂಟಿಜೆನ್) ಟೆಸ್ಟ್ ಮಾಡಬೇಕು ಹಾಗೂ ಕೇಂದ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಸರ್ಕಾರಳಿಗೆ ತಾಕೀತು ಮಾಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಕೋವಿಡ್ ನಿಯಮಗಳ ನಿರ್ಧಾರದ ಜವಾಬ್ದಾರಿ ನೀಡಿದೆ. ಅದರಂತೆ ಐಎಲ್​ಐ, ಸ್ಯಾರಿ ಕೇಸ್​ಗಳ ಮೇಲೆ ನಿಗಾ ಇಡಲು ಚಿಕಿತ್ಸೆ ಬೇಕಾದ ಮೂಲ ಸೌಕರ್ಯ ಕ್ರೋಢೀಕರಣ ಮಾಡಬೇಕು. ಆರ್ಟಿಪಿಸಿಆರ್ ಪಾಸಿಟಿವ್ ಬಂದರೆ ಜೆನೆಮಿಕ್ ಸೀಕ್ವೆನ್ಸ್​ಗೆ ಸ್ಯಾಂಪಲ್ ಕಳಿಸಬೇಕು ಎಂದು ಸೂಚಿಸಿದೆ.

ಹೆಚ್ಚಿನ ಸಂಖ್ಯೆಯ RT-PCR ಪರೀಕ್ಷೆ

ಹೆಚ್ಚಿನ ಸಂಖ್ಯೆಯ RT-PCR ಪರೀಕ್ಷೆ ಮಾಡುವುದು. ಜೀನೋಮ್ ಅನುಕ್ರಮಕ್ಕಾಗಿ ಧನಾತ್ಮಕ ಮಾದರಿಗಳನ್ನು ಭಾರತೀಯ SARS COV-2 ಜೀನೋಮಿಕ್ಸ್ ಕನ್ಸೋರ್ಟಿಯಮ್ ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಉಸಿರಾಟದ ನೈರ್ಮಲ್ಯವನ್ನು ಅನುಸರಿಸಬೇಕು. ಕೋವಿಡ್​ ನಿಯಂತ್ರಿಸುವಲ್ಲಿ ನಿರಂತರ ಬೆಂಬಲದೊಂದಿಗೆ ಸಮುದಾಯದ ಜಾಗೃತಿಯನ್ನು ಉತ್ತೇಜಿಸಬೇಕು ಎಂದು ಹೇಳಿದೆ.

ಜೆಎನ್.1 ವೈರಸ್ ಲಕ್ಷಣಗಳು?

  • ಜ್ವರ, ಕೆಮ್ಮು, ಸುಸ್ತು,
  • ಮೂಗು ಕಟ್ಟುವಿಕೆ
  • ಸ್ರವಿಸುವ ಮೂಗು
  • ಅತಿಸಾರ ಮತ್ತು ತಲೆನೋವು

RELATED ARTICLES

Related Articles

TRENDING ARTICLES