ನವದೆಹಲಿ : ನಿರುದ್ಯೋಗ ಮತ್ತು ದುಬಾರಿ ಬೆಲೆಯೇ ಸಂಸತ್ ಮೇಲಿನ ದಾಳಿಗೆ ಪ್ರಮುಖ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿರುವ ಅವರು, ಸಂಸತ್ ಮೇಲಿನ ದಾಳಿ ಏಕೆ ನಡೆಯಿತು? ಸಂಸತ್ತಿನ ಭದ್ರತಾ ಲೋಪಕ್ಕೆ ಪ್ರಧಾನಿ ಮೋದಿಯವರ ನೀತಿಗಳೇ ಕಾರಣ ಎಂದು ದೂರಿದ್ದಾರೆ.
ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆ. ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗೆ ಮೋದಿ ನೀತಿಗಳೇ ಕಾರಣ. ದೇಶದ ನಾಗರಿಕರಿಗೆ ಉದ್ಯೋಗ ಸಿಗುತ್ತಿಲ್ಲ. ಇವೇ ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಮುಖ್ಯ ಕಾರಣ ಎಂದು ರಾಹುಲ್ ಗಾಂಧಿ ಚಾಟಿ ಬಿಸಿದ್ದಾರೆ.
ಕಾಂಗ್ರೆಸ್ ಹೆಸರಿನಲ್ಲಿ ವೋಟು ಕೇಳ್ತಾರೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಧ್ಯಮಗಳೊಂದಿಗೆ ಮಾತ್ರ ಮಾತನಾಡುತ್ತಾರೆ. ಆದರೆ, ಸದನದಲ್ಲಿ ಈ ವಿಷಯದ ಬಗ್ಗೆ ಹೇಳಿಕೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ವೋಟು ಕೇಳುತ್ತಾರೆ. ಗಾಂಧಿ ಹಾಗೂ ನೆಹರೂ ಅವರನ್ನು ನಿಂದಿಸಿ ವೋಟು ತೆಗೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.