ಬಳ್ಳಾರಿ : ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು CBIಗೆ ವಹಿಸುವ ಮುನ್ನ ಸ್ಪೀಕರ್ ಅವರ ಪರ್ಮಿಷನ್ ತೆಗೆದುಕೊಂಡಿಲ್ಲ ಎಂದು ಸಚಿವ ನಾಗೇಂದ್ರ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯನ್ನು ಜೈಲಿಗೆ ಹಾಕಿದ್ರೆ ಸಾಕು ಎಂದು ತರಾತುರಿಯಲ್ಲಿ ಸಿಬಿಐಗೆ ವಹಿಸಿದ್ರು. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಗಿರುವುದೆಲ್ಲಾ ರಾಜಕೀಯ ಪ್ರೇರಿತ. ನಮ್ಮ ಪ್ರಕರಣಗಳು ಇವತ್ತೋ ನಾಳೆಯೋ ಇತ್ಯರ್ಥವಾಗುತ್ತೆ. ಡಿಕೆಶಿ ತಪ್ಪಿತಸ್ಥರಲ್ಲ, ಖಂಡಿತ ಅವರು ಈ ಕೇಸ್ನಿಂದ ಹೊರಗೆ ಬರ್ತಾರೆ ಎಂದು ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ರಿಯಾಕ್ಷನ್ ಕೊಡಲ್ಲ
ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣ ಕೋರ್ಟ್ನಲ್ಲಿದೆ. ಹೈಕೋರ್ಟ್ಗೆ ಬಿಟ್ಟ ವಿಚಾರವನ್ನು ನಾವು ಹೇಳೋದು ಸರಿಯಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಬಗ್ಗೆ ಮಾತನಾಡಿದ್ರು. ಜಾತಿ ಗಣತಿ ವರದಿ ಬಿಡುಗಡೆಯಾಗಲಿ. ಬಿಡುಗಡೆ ಆದ ಮೇಲೆ ಚರ್ಚೆ ಮಾಡಬಹುದು. ಬಿಡುಗಡೆಯಾಗದೇ ಬೇರೆ ಬೇರೆ ರೀತಿ ಹೇಳುವುದಲ್ಲ. ಬಿಡುಗಡೆ ನಂತರ ಸಾಧಕ-ಬಾಧಕ ಚರ್ಚೆ ಮಾಡಬಹುದು ಎಂದು ತಿಳಿಸಿದ್ದಾರೆ.