ಬೆಂಗಳೂರು : ಕನ್ನಡಿಗ ಕೆ.ಎಲ್ ರಾಹುಲ್ ತವರು ಅಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಕುವರನ ಆರ್ಭಟಕ್ಕೆ ಹಿಟ್ ಮ್ಯಾನ್ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್ ಹಾಗೂ ಕಿಂಗ್ ಕೊಹ್ಲಿ ದಾಖಲೆ ಉಡೀಸ್ ಆಗಿದೆ.
ಐಸಿಸಿ ವಿಶ್ವಕಪ್-2023 ಟೂರ್ನಿಯ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕೇವಲ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಶ್ರೇಯಸ್ಸಿಗೆ ಪಾತ್ರರಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸುವ ಮೂಲಕ ನೆದರ್ಲೆಂಡ್ಸ್ ಗೆಲ್ಲಲು 411ರನ್‌ಗಳ ಗುರಿ ನೀಡಿತು. ಈ ಬೃಹತ್ ಮೊತ್ತ ಪೇರಿಸುವಲ್ಲಿ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಪ್ರದರ್ಶನ ಪ್ರಮುಖ ಪಾತ್ರ ವಹಿಸಿತು.
ಶ್ರೇಯಸ್ ಅಯ್ಯರ್ 94 ಎಸೆತಗಳಲ್ಲಿ 128 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕೆ.ಎಲ್ ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸಿದರು. ಈ ಮೂಲಕ ಕೆಎಲ್ ರಾಹುಲ್ ಕೇವಲ 62 ಎಸೆತಗಳಲ್ಲಿ ಹೊಸ ಮೈಲಿಗಲ್ಲು ತಲುಪುವ ಮೂಲಕ ವಿಶ್ವಕಪ್ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡರು.
ವಿಶ್ವಕಪ್‌ನಲ್ಲಿ ಭಾರತಕ್ಕೆ ವೇಗದ ಶತಕ
- 62 ಎಸೆತಗಳು : ಕೆ.ಎಲ್ ರಾಹುಲ್ (NED) 2023*
- 63 ಎಸೆತಗಳು : ರೋಹಿತ್ ಶರ್ಮಾ (AFG) 2023
- 81 ಎಸೆತಗಳು : ವೀರೇಂದ್ರ ಸೆಹ್ವಾಗ್ (BER) 2007
- 83 ಎಸೆತಗಳು : ವಿರಾಟ್ ಕೊಹ್ಲಿ (BAN) 2011
📸📸 HUNDRED off just 62 deliveries 👏👏
A marvellous knock that from KL Rahul 🔝#TeamIndia | #CWC23 | #MenInBlue | #INDvNED pic.twitter.com/D6dwgfYE1n
— BCCI (@BCCI) November 12, 2023