Friday, November 22, 2024

ಬೆಂಗಳೂರು ದಕ್ಷಿಣ ಅಲ್ಲದಿದ್ರೆ ‘ದೆಹಲಿ, ದುಬೈ’ ಅಂತ ಮಾಡಲಿ : ಡಿಕೆಶಿ ಹೇಳಿಕೆಗೆ ಹೆಚ್​ಡಿಕೆ ವ್ಯಂಗ್ಯ

ರಾಮನಗರ : ಶೀಘ್ರದಲ್ಲೇ ರಾಮನಗರಕ್ಕೆ ಮರುನಾಮಕರಣ ಮಾಡಲಾಗುವುದು ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಅಲ್ಲದಿದ್ರೆ ದೆಹಲಿ ಅಂತ ಮಾಡಲಿ. ದೆಹಲಿ ಅಂತ ಮಾಡಿದ್ರೆ ಪ್ರಪಂಚದ ಮೂಲೆ ಮೂಲೆ ಇಂದ ಎಲ್ಲಾ ಬರ್ತಾರೆ. ರಾಮನಗರವನ್ನ ಬೆಂಗಳೂರು ಮಾಡೋದು ಬೇಡ, ದೆಹಲಿ ಅಥವಾ ದುಬೈ ಅಂತಾನೆ ಮಾಡಿ ಎಂದು ಕುಟುಕಿದ್ದಾರೆ.

ಹೆಸರು ಬದಲಾವಣೆ ಮಾಡುವುದರಿಂದ ಯಾರೂ ಬರಲ್ಲ. ನೀವೇನು ಮೂಲಭೂತ ಸೌಕರ್ಯ ಕೊಡ್ತಿರಿ, ಅಭಿವೃದ್ಧಿ ಮಾಡ್ತೀರಿ ಅದರ ಮೇಲೆ ಜನ ಬರೋದು. ಅವರಿಗೆ ಬೇರೆ ಕೆಲಸ ಇಲ್ಲ, ಜನರ ಕೆಲಸ ಮಾಡಲ್ಲ. ಜನರ ಗಮನಸೆಳೆಯೋಕೆ ಹೀಗೆ ಮಾತನಾಡ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಫೋನ್ ಕದ್ದಾಲಿಕೆ ಮಾಡಿ ಏನ್ ಪ್ರಯೋಜನ?

ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಆಗುತ್ತಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಸರ್ಕಾರದಲ್ಲೂ ಅಧಿಕಾರಿಗಳ ಮಟ್ಟದಲ್ಲಿ ಇದೆಲ್ಲ ನಡೆಯುತ್ತೆ. ಫೋನ್ ಕದ್ದಾಲಿಕೆ ಮಾಡಿ ಏನ್ ಪ್ರಯೋಜನ? ಅವರಿಗೆ ಅನುಕೂಲ ಆಗುತ್ತೆ ಅಂದ್ರೆ ಮಾಡಲಿ ಬಿಡಿ ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES