Friday, November 22, 2024

ಜದ್ರಾನ್ ಶತಕದ ವೈಭವ : ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಬೃಹತ್ ಸ್ಕೋರ್

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬೃಹತ್ ಮೊತ್ತ ಕಲೆಹಾಕಿದೆ.

ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ ಶತಕ ಸಿಡಿಸಿದ್ದರಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಅಫ್ಘಾನಿಸ್ತಾನ ​291 ರನ್​ ಕಲೆಹಾಕಿತು.

ಕೊನೆಯ ಓವರ್​ಗಳಲ್ಲಿ ಕ್ರೀಸ್​ಗಿಳಿದ ಆಲ್​ರೌಂಡರ್ ರಶೀದ್ ಖಾನ್ 18 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ನೆರವಿನೊಂದಿಗೆ ಅಜೇಯ 35 ರನ್​ ಸಿಡಿಸಿದರು. ಈ ಮೂಲಕ ತಂಡದ ಮೊತ್ತವನ್ನು 290ರ ಗಡಿ ದಾಟಿಸಿದರು. ಉಳಿದಂತೆ, ರಹಮಾನುಲ್ಲಾ ಗುರ್ಬಾಝ್ 21, ರಹಮತ್ ಶಾ 30, ಹಶ್ಮತುಲ್ಲಾ ಶಾಹಿದಿ 26, ಅಜ್ಮತುಲ್ಲಾ ಒಮರ್​ಝಾಹಿ 22 ರನ್ ಗಳಿಸಿದರು. ಜೋಶ್ ಹ್ಯಾಝಲ್‌ವುಡ್ 2, ಮಿಚೆಲ್ ಸ್ಟಾರ್ಕ್, ಮ್ಯಾಕ್ಸ್​ವೆಲ್ ಹಾಗೂ ಆಡಂ ಝಂಪಾ ತಲಾ ಒಂದು ವಿಕೆಟ್ ಪಡೆದರು.

ಇತಿಹಾಸ ಸೃಷ್ಟಿಸಿದ ಜದ್ರಾನ್

ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ ಭರ್ಜರಿ ಶತಕ ಸಿಡಿಸಿದರು. ವಿಶ್ವಕಪ್ ಇತಿಹಾಸದಲ್ಲಿಯೇ ಅಫ್ಘಾನ್ ಆಟಗಾರನೊಬ್ಬ ಶತಕ ಸಿಡಿಸಿದ್ದು ಇದೇ ಮೊದಲು. ಜದ್ರಾನ್ 143 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನೊಂದಿಗೆ ಅಜೇಯ 129 ರನ್​ ಗಳಿಸಿದರು. ಇದಕ್ಕೂ ಮುನ್ನ ಸ್ಲಾಟ್ಲೆಂಡ್ ವಿರುದ್ಧ 96 ರನ್​ ಗಳಿಸಿ ಸಮೀವುಲ್ಲಾ ಶಿನಾರಿ ಔಟಾಗಿದ್ದರು. ಇದೀಗ ಅವರ ದಾಖಲೆಯನ್ನು ಜದ್ರಾನ್ ಮುರಿದಿದ್ದಾರೆ.

RELATED ARTICLES

Related Articles

TRENDING ARTICLES