Friday, November 22, 2024

ಕುತೂಹಲ ಹೆಚ್ಚಿಸಿದ ಸೆಮಿ ಫೈನಲ್‌!: ಭಾರತದ ಎದುರಾಳಿ ಯಾರು?

ಮುಂಬೈ: ಭಾರತ ಪ್ರಸಕ್ತ ವರ್ಲ್ಡ್​ಕಪ್​ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗಿದ್ದು, ಸೆಮೀಸ್​ ಪ್ರವೇಶಿಸಿದೆ. ಇನ್ನೂ ಒಂದು ಪಂದ್ಯ ಇದೆ ಆದ್ರೂ, ಭಾರತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಖಾತ್ರಿಪಡಿಸಿಕೊಂಡಿದೆ.

ಬಾರತದ ಎದುರು ಸೆಮೀಸ್​ನಲ್ಲಿ ಎದುರುಗೊಳ್ಳುವ ತಂಡ ಯಾವುದು ಎಂಬುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಮೊದಲ ಸ್ಥಾನದಲ್ಲಿ ಮುಂದುವರಿದಿರುವ ಬಾರತ ಅಂಕಪಟ್ಟಿಯ 4ನೇ ತಂಡದ ವಿರುದ್ದ ಸೆಮೀಸ್​ ಕಾದಾಡಲಿದೆ. ಆದರೇ, 4ನೇ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನೋ ಲೆಕ್ಕಾಚಾರ ಇನ್ನೂ ಹಲವು ಪಂದ್ಯಗಳಲ್ಲಿ ನಿರ್ಧಾರವಾಗಲಿದೆ.

ಇದನ್ನೂ ಓದಿ: ಪ್ರತಿಮಾ ಕೊಲೆ ಪ್ರಕರಣ: ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ

ನ್ಯೂಜಿಲೆಂಡ್​, ಅಥವಾ ಅಫ್ಘಾನಿಸ್ತಾನ​ ಭಾರತದ ಎದುರಾಳಿ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ನವೆಂಬರ್​ 15ರಂದು ಭಾರತ ತನ್ನ ಸೆಮೀಸ್ ಆಡಲಿದೆ. ಆ ಸ್ಥಾನಕ್ಕೆ ಪಾಕ್​ ಬಂದದ್ದೇ ಆದಲ್ಲಿ, ಪಂದ್ಯದ ದಿನ ಮತ್ತು ಸ್ಥಳ ಬದಲಾವಣೆ ಆಗಲಿದೆ. ಪಾಕ್​ 4ನೇ ಸ್ಥಾನಕ್ಕೆ ಬಂದರೆ, ಭಾರತ 16ರಂದು ಈಡನ್​ ಗಾರ್ಡನ್​ನಲ್ಲಿ ಪಂದ್ಯ ಆಡಲಿದೆ. ಇದಕ್ಕೆ ಬಿಸಿಸಿಐ ಮತ್ತು ಪಿಸಿಬಿಯ ನಡುವಿನ ಒಪ್ಪಂದವೇ ಕಾರಣವಾಗಿದೆ. ಅಂಕಪಟ್ಟಿ 2 ಮತ್ತು 3ನೇ ಸ್ಥಾನಕ್ಕೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ ನಡುವೆ ಪೈಪೋಟಿ ಏರ್ಪಟ್ಟಿದೆ.

RELATED ARTICLES

Related Articles

TRENDING ARTICLES