Friday, November 22, 2024

ಕೊಹ್ಲಿ ಶತಕ ಮಿಸ್.. 15 ಇನ್ನಿಂಗ್ಸ್​ಗಳಲ್ಲಿ 8 ಬಾರಿ ವಿರಾಟ್ ಶತಕ ವಂಚಿತ

ಬೆಂಗಳೂರು : ರನ್ ಮೆಷಿನ್ ಕಿಂಗ್ ಕೊಹ್ಲಿ ಇಂದು ಶತಕ ಸಿಡಿಸುತ್ತಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳು ವಿರಾಟ್ ಔಟಾಗುತ್ತಿದ್ದಂತೆ ಒಂದು ಕ್ಷಣ ಶಾಕ್ ಆದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕದ (49) ದಾಖಲೆಯನ್ನು ಸಚಿನ್ ತವರು ನೆಲದಲ್ಲೇ ಸರಿಗಟ್ಟುವ ತವಕದಲ್ಲಿದ್ದ ಕಿಂಗ್ ಕೊಹ್ಲಿ ಶತಕದ ಸನಿಹದಲ್ಲಿ ಔಟಾದರು. ಈ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದರು.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಬ್ಯಾಟರ್​ಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಮಧುಶಂಕ 88 ರನ್​ ಗಳಿಸಿದ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ಇದಕ್ಕೂ ಮೊದಲು 92 ರನ್​ ಗಳಿಸಿದ ಶುಭ್​ಮನ್ ಗಿಲ್ ಹಾಗೂ ನಾಯಕ ರೋಹಿತ್​ ಶರ್ಮಾ (4) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

8 ಬಾರಿ ಶತಕ ವಂಚಿತ

ಕಳೆದ 15 ಇನ್ನಿಂಗ್ಸ್‌ಗಳಲ್ಲಿ (ವಿಶ್ವಕಪ್‌ನಲ್ಲಿ) ವಿರಾಟ್ ಕೊಹ್ಲಿ 8 ಬಾರಿ ಶತಕ ವಂಚಿತರಾಗಿದ್ದಾರೆ. 82(77), 77(65), 67(63), 72(82), 66(76), 26(27), 34*(41), 1(6), 85(116), 55*(56 ), 16(18), 103*(97), 95(104), 0(9) ಹಾಗೂ ಇಂದು 88(94) ರನ್​ ಗಳಿಸಿದ್ದಾರೆ. ವಾಂಕಡೆಯಲ್ಲಿ ಇಂದು ನಡೆದ ಪಂದ್ಯದಲ್ಲಿ ಸಚಿನ್ ಎದುರೇ ಅವರ ದಾಖಲೆ ಸರಿಗಟ್ಟುವ ಅವಕಾಶವಿತ್ತು. ಆದರೆ, ಇದು ಮಿಸ್​ ಆಗಿದ್ದು, ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದಾರೆ.

ಗಿಲ್ ಶತಕ ಜಸ್ಟ್ ಮಿಸ್

ಇನ್ನೂ ಭಾರತದ ಯಂಗ್ ಗನ್ ಶುಭ್​ಮನ್ ಗಿಲ್ ಬೊಂಬಾಟ್ ಫಾರ್ಮ್​ಗೆ ಮರಳಿದ್ದು, ಕೇವಲ 8 ರನ್​ಗಳಿಂದ ಶತಕದಿಂದ ವಂಚಿತರಾದರು. ಲಂಕಾ ವಿರುದ್ಧ 92 ರನ್​ ಗಳಿಸಿದ್ದಾಗ ಮಧುಶಂಕ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ತಮ್ಮ 7ನೇ ಶತಕದ ಹೊಸ್ತಿಲಲ್ಲಿದ್ದ ಗಿಲ್​ ಅವರು ಶತಕವನ್ನು ಸ್ವಲ್ಪದರಲ್ಲೇ ಮಿಸ್​ ಮಾಡಿಕೊಂಡರು.

RELATED ARTICLES

Related Articles

TRENDING ARTICLES