ಬೆಂಗಳೂರು : ವಿಶ್ವಕಪ್-2023 ಟೂರ್ನಿಯ ಮೊದಲ ಐದು ಪಂದ್ಯಗಳನ್ನು ಗೆದ್ದು ಅದ್ಭುತ ಫಾರ್ಮ್ನಲ್ಲಿದ್ದ ಭಾರತ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ನಲ್ಲಿ ಎಡವಿದೆ.
ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿದೆ. ಈ ಮೂಲಕ ಇಂಗ್ಲೆಂಡ್ ಗೆಲುವಿಗೆ 230 ರನ್ಗಳ ಸಾಧಾರಣ ಗುರಿ ನೀಡಿದೆ.
ಭಾರತದ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ (87) ಗಳಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್ ಯಾದವ್ 49 ರನ್ ಗಳಿಸಿ ಒಂದು ರನ್ನಿಂದ ಅರ್ಧಶತಕ ವಂಚಿತರಾದರು. ಕೆ.ಎಲ್ ರಾಹುಲ್ 39, ಜಸ್ಪ್ರಿತ್ ಬುರ್ಮಾ 16 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ಎರಡು ಅಂಕಿ ದಾಟುವಲ್ಲಿ ವಿಫಲರಾದರು.
ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3, ಕ್ರಿಸ್ ವೋಕ್ಸ್, ಆದಿಲ್ ರಶೀದ್ ತಲಾ ಎರಡು ವಿಕೆಟ್ ಹಾಗೂ ಮಾರ್ಕ್ ವುಡ್ ಒಂದು ವಿಕೆಟ್ ಪಡೆದರು. ರನ್ ಮೆಷಿನ್ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಬ್ಯಾಟ್ ಸದ್ದು ಮಾಡಲಿಲ್ಲ. ಹೀಗಾಗಿ, ಭಾರತ ಈ ಟೂರ್ನಿಯಲ್ಲಿ ಕಡಿಮೆ ರನ್ ಕಲೆಹಾಕಿತು. ಇತ್ತ, ಇನ್ನಿಂಗ್ಸ್ ಆರಂಭದಿಂದಲೂ ಇಂಗ್ಲೆಂಡ್ ಬೌಲರ್ಗಳು ಮೇಲುಗೈ ಸಾಧಿಸಿದರು.