ಬೆಂಗಳೂರು : ಶಿವಮೊಗ್ಗ-ತಿರುಪತಿ ನಡುವಿನ ರೈಲು ರೇಣುಗುಂಟ ಎಕ್ಸಪ್ರೆಸ್ ಸ್ಥಗಿತ ಮಾಡಲಾಗಿದ್ದು, ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಸಂಸದ ಬಿ.ವೈ ರಾಘವೇಂದ್ರಗೆ ಮನವಿ ಸಲ್ಲಿಸಿದೆ. ಶಿವಮೊಗ್ಗದಿಂದ ತಿರುಪತಿಗೆ ಸಂಚರಿಸುತ್ತಿದ್ದ ರೈಲಿನ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರವು ಬೃಹತ್ ನಗರವಾಗಿ ಹೊರಹೊಮ್ಮುತ್ತಿದೆ. ದೇಶ-ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಶಿವಮೊಗ್ಗ ನಗರಕ್ಕೆ ವ್ಯಾಪಾರ-ವಹಿವಾಟುಗಳಿಗೆ ಬರುತ್ತಾರೆ. ರೈಲ್ವೆ ಇಲಾಖೆಗೆ ಬಹಳಷ್ಟು ಆದಾಯವಾಗುತ್ತಿದ್ದರೂ ರೈಲು ಸ್ಥಗಿತ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಶಿವಮೊಗ್ಗ ನಗರಕ್ಕೆ ಇನ್ನೂ ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ. ಈಗಿರುವ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಜೋಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಮತ್ತೆ ಮನ್ ಕಿ ಬಾತ್ ಸಮಯ
ಸಂಸದ ಬಿ.ವೈ ರಾಘವೇಂದ್ರ ಅವರು ಇಂದು ಶಿಕಾರಿಪುರದಲ್ಲಿ ಬಿಜೆಪಿ ಪಕ್ಷದ ಸಹಕಾರ್ಯಕರ್ತರೆಲ್ಲರ ಜೊತೆ ಕುಳಿತು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಆಲಿಸಿದರು. ಪ್ರಧಾನಿ ಮೋದಿಯವರು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ಈ ಕಾರ್ಯಕ್ರಮ ಈಗಾಗಲೇ ನೂರು ಸಂಚಿಕೆಗಳನ್ನು ದಾಟಿ, ನೂರು ಕೋಟಿಗೂ ಹಮಚ್ಚು ಜನರನ್ನು ತಲುಪಿದೆ. ದೇಶದ ಬಗ್ಗೆ ಪ್ರಧಾನಿಯವರ ಮನದ ಮಾತು ದೇಶದ ಮೂಲೆಮೂಲೆಯಲ್ಲಿರುವ ಎಲ್ಲರ ಮನಸ್ಸನ್ನೂ ತಲುಪಿದೆ ಎಂದು ಹೇಳಿದ್ದಾರೆ.