Friday, November 22, 2024

ದಸರಾದಿಂದ KSRTC ಆದಾಯ ದುಪ್ಪಟ್ಟು!

ಬೆಂಗಳೂರು: ಶಕ್ತಿ ಯೋಜನೆಯ ಪ್ರೇರಣೆ, ಸಾಲು ರಜೆಗಳ ಕಾರಣಕ್ಕೆ ಈ ಬಾರಿ ಮೈಸೂರು ದಸರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದು, KSRTCಗೆ ದುಪ್ಪಟ್ಟು ಆದಾಯ ಲಭಿಸಿದೆ.

ದಸರಾ ವೇಳೆ ಕಳೆದ ಬಾರಿ ನೀಡಿದ ಸೇವೆಯಿಂದಾಗಿ 2.70 ಕೋಟಿ ರೂ. ಆದಾಯ ಬಂದಿತ್ತು. ಆದರೆ, ಈ ಬಾರಿ ದಸರೆ ಮುಕ್ತಾಯಗೊಳ್ಳಲು ಇನ್ನೂ ಎರಡು ದಿನ ಬಾಕಿ ಇರುವಂತೆಯೇ 4 ಕೋಟಿ ರೂ. ಆದಾಯ ಬಂದಿದೆ. ಈ ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರ ಮತ್ತೆ ಹೆಚ್ಚುವರಿಯಾಗಿ 1 ಕೋಟಿ ರೂ. ಆದಾಯ ಬರಲಿದೆ ಹೀಗಾಗಿ ಒಟ್ಟು ಈ ಬಾರಿ ದಸರೆಯಲ್ಲಿ5 ಕೋಟಿ ರೂ. ಆದಾಯ ಬಂದಂತಾಗುತ್ತದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮೇಘ ಕಾಲಜ್ಞಾನ; ಅ.29 ರಿಂದ ನ.1ರ ವರೆಗೆ ಸಾಧಾರಣ ಮಳೆ ಸಾಧ್ಯತೆ

ಅ. 21, 22 ವಾರಾಂತ್ಯ ರಜೆ ದಿನವಾಗಿದ್ದವು. 23ರಂದು ಆಯುಧ ಪೂಜೆ, 24ರಂದು ವಿಜಯದಶಮಿ ರಜೆ ಬಂದಿದ್ದರಿಂದ ಈ ಬಾರಿ ದಸರಾ ಮಹೋತ್ಸವಕ್ಕೆ ಜನ ಸಾಗರವೇ ಸೇರಿತ್ತು. ಜಿಲ್ಲೆಯಲ್ಲಿ ಸಾಮಾನ್ಯವಾಗಿ ನಿತ್ಯವೂ 4.90 ಲಕ್ಷ ಜನರು ಪ್ರಯಾಣಿಸುತ್ತಾರೆ.

ಆದರೆ, ವಿಜಯದಶಮಿ ಹಿಂದಿನ ಒಂದು ವಾರ ಹಾಗೂ ನಂತರದ ಮೂರ್ನಾಲ್ಕು ದಿನ ನಿತ್ಯ ಅಂದಾಜು 30,000 ಮಂದಿ ಹೆಚ್ಚುವರಿಯಾಗಿ ಸೇವೆ ಬಳಕೆ ಮಾಡಿದ್ದಾರೆ. ಒಟ್ಟು 11 ದಿನ ಹೆಚ್ಚುವರಿಯಾಗಿ 3.5 ಲಕ್ಷ ಮಂದಿ KSRTC ಬಸ್‌ ಸೇವೆ ಬಳಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES