ವಿಜಯಪುರ : ಅರಮನೆ ವೇದಿಕೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಸಾರಿರುವ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಡಹಬ್ಬದಲ್ಲಿ ತಾವು ಸಾಂಸ್ಕೃತಿಕ ರಾಯಭಾರಿಯೋ? ಅಥವಾ ರಾಜಕೀಯ ರಾಯಭಾರಿಯೋ? ಈ ಬಗ್ಗೆ ಹಂಸಲೇಖ ಅವರು ಸ್ಪಷ್ಟಪಡಿಸಬೇಕು ಎಂದು ಕುಟುಕಿದ್ದಾರೆ.
ಈ ರೀತಿಯಾದ ಭಾಷಣ ಮಾಡುವುದಕ್ಕೆ ಇದು ವೇದಿಕೆ ಆಗಿರಲಿಲ್ಲ. ದಸರೆಯಲ್ಲಿ ಯದುವಂಶದ ಅರಸರ ಕೊಡುಗೆಯನ್ನು ತಾವು ಸ್ಮರಿಸಬೇಕಿತ್ತು, ಸರ್ ಎಂ.ವಿಶ್ವೇಶ್ವರಯ್ಯನವರ ವಿದ್ವತ್ತು, ತ್ಯಾಗವನ್ನು ವರ್ಣಿಸಬೇಕಿತ್ತು. ಕನ್ನಡ ಸಾಹಿತ್ಯದ ಬಗ್ಗೆ, ಮೈಸೂರಿನ ಇತಿಹಾಸದ ಬಗ್ಗೆ ಮಾತನಾಡಬೇಕಿತ್ತು ಎಂದು ಹರಿಹಾಯ್ದಿದ್ದಾರೆ.
ಕೊಳ್ಳೆ ಹೊಡೆಯುವ ಯೋಜನೆ
ಮುಮದುವರಿದು, ಸ್ವತಃ ತನ್ನ ರಾಣಿಯ ಒಡವೆಗಳನ್ನು ಮಾರಿ ಕೃಷ್ಣ ರಾಜ ಅಣೆಕಟ್ಟನ್ನು ನಿರ್ಮಾಣ ಮಾಡಿದ ಆಧುನಿಕ ಮೈಸೂರಿನ ಮಹಾಶಿಲ್ಪಿ ರಾಜರ್ಷಿ ನಾಲ್ವಡಿ ಕೃಷ್ಣರ ಒಡೆಯರ್ ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಬೇಕಿತ್ತು. ಅವಕಾಶವಾದಿ ರಾಜಕಾರಣಿಗಳನ್ನು ಹಾಗೂ ರಾಜ್ಯ ಬೊಕ್ಕಸವನ್ನು ಕೊಳ್ಳೆ ಹೊಡೆಯುವ ಯೋಜನೆಗಳ ಪ್ರಚಾರ ಅನಗತ್ಯವಾಗಿತ್ತು? ಎಂದು ಶಾಸಕ ಯತ್ನಾಳ್ ಪ್ರಶ್ನಿಸಿದ್ದಾರೆ.
ನಾಡಹಬ್ಬದಲ್ಲಿ ತಾವು ‘ಸಾಂಸ್ಕೃತಿಕ ರಾಯಭಾರಿಯೊ’, ‘ರಾಜಕೀಯ ರಾಯಭಾರಿಯೊ’ ಎಂದು ಹಂಸಲೇಖ ಅವರು ಸ್ಪಷ್ಟಪಡಿಸಬೇಕು. ಈ ರೀತಿಯಾದ ಭಾಷಣ ಮಾಡುವುದಕ್ಕೆ ಇದು ವೇದಿಕೆ ಆಗಿರಲಿಲ್ಲ. ದಸರೆಯಲ್ಲಿ ಯದುವಂಶದ ಅರಸರ ಕೊಡುಗೆಯನ್ನು ತಾವು ಸ್ಮರಿಸಬೇಕಿತ್ತು, ಸರ್ ಎಂ.ವಿಶ್ವೇಶ್ವರಯ್ಯ ನವರ ವಿದ್ವತ್ತು, ತ್ಯಾಗವನ್ನು ವರ್ಣಿಸಬೇಕಿತ್ತು. ಕನ್ನಡ ಸಾಹಿತ್ಯದ… pic.twitter.com/CSfDkxiTEg
— Basanagouda R Patil (Yatnal) (@BasanagoudaBJP) October 23, 2023