ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಬಹಳ ಅದ್ಧೂರಿಯಿಂದ ನಡೆಯುತ್ತಿದ್ದು, ಸಿಡಿಮದ್ದು ತಾಲೀಮು ವೇಳೆ ಅವಘಡವೊಂದು ನಡೆದಿದೆ.
ಸಿಡಿಮದ್ದು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯಗಳಾದ ಘಟನೆ ಭಾನುವಾರ ಪುಷ್ಪಾರ್ಚನೆ ರಿಹರ್ಸಲ್ ವೇಳೆ ನಡೆದಿದೆ. ನಿನ್ನೆ ಸಂಜೆ ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್ ನಡೆಸಲಾಗಿತ್ತು. ಈ ವೇಳೆ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗಿತ್ತು. ಈ ಕುಶಾಲತೋಪು ಸಿಡಿದು ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಕಾಲಜ್ಞಾನ ಪ್ರಕಾರ ಮೈಸೂರು ದಸರಾ ಹಬ್ಬಕ್ಕೆ ಕಂಟಕ!
ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ನಿಜವಾಯ್ತಾ ಕಾಲಜ್ಞಾನ ಮಠದ ಸ್ವಾಮೀಜಿಗಳ ಭವಿಷ್ಯ! :
ಶ್ರೀ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಕಾಲಜ್ಞಾನದ ಪ್ರಕಾರ ಅಕ್ಟೋಬರ್ 24ರ ವಿಜಯದಶಮಿ ಹಬ್ಬದ ವೇಳೆಗೆ ಕೆಲವೊಂದು ದುಷ್ಟಶಕ್ತಿಗಳ ಕುತಂತ್ರದಿಂದ ಮೈಸೂರಿನಲ್ಲಿ ನಡೆಯುತ್ತಿರುವ ನಮ್ಮ ಹೆಮ್ಮೆಯ ನಾಡಹಬ್ಬಕ್ಕೆ ವಿಘ್ನವನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ.
ಮೈಸೂರು ಆಡಳಿತ ವರ್ಗ, ಪುರೋಹಿತ ವರ್ಗ ಮತ್ತು ರಕ್ಷಣಾ ಸಿಬ್ಬಂದಿ ವರ್ಗದವರು ಇನ್ನೀ ಹೆಚ್ಚಿನ ಭದ್ರತೆಯನ್ನು ನೀಡುವುದರಿಂದ ಬರುವ ಅಪಾಯಗಳಿಂದ ಪಾರಾಗಬಹುದು ಎಂದು ಕಾಲಜ್ಞಾನ ನುಡಿದಿದ್ದರು. ಈದ ಭವಿಷ್ಯ ನುಡಿದ ಬೆನ್ನಲ್ಲೇ ಮೈಸೂರಿನಲ್ಲಿ ಅವಘಡ ಸಂಭವಿಸಿದೆ.