ತುಮಕೂರು : ನಿಜವಾದ ತಲ್ವಾರ್ ಎಂಬ ಪ್ರಶ್ನೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗರಂ ಆದರು. ನಿಜವಾದ ತಲ್ವಾರ್ ಅಂತ ಹೇಳ್ತಿದ್ದಾರೆ. ನಾನು ಅದನ್ನು ಹೋಗಿ ನೋಡಿದ್ನಾ? ನಿಜವಾದ ತಲ್ವಾರ್ ಇರಬಹುದು. ಆದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಚಾರ ಮಾಡಿದೆ. ಮರದ ತುಂಡನ್ನು ಕತ್ತಿ ತರ ಮಾಡಿ, ಬಣ್ಣ ಹಾಕಿ, ಅದನ್ನು ಪ್ರದರ್ಶನ ಮಾಡಿದ್ದಾರೆ ಅಂತ ಎಸ್ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ. ಅಂತಹದ್ದು ಏನು ನಡೆದಿಲ್ಲ ಎಂದು ಡ್ಯಾಮೇಕ್ ಕಂಟ್ರೋಲ್ಗೆ ಮುಂದಾದರು.
ಯಾರಿಗೋ ಚಾಕು ಹಾಕಿದ್ರು, ಯಾರಿಗೋ ಕತ್ತಿಯಲ್ಲಿ ಹೊಡೆದಿದ್ದು. ಇಂತಹದ್ದನೆಲ್ಲಾ ಮಾತನಾಡಬಾರದು. ಮೊದಲೇ ನಾವು ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಿದ್ವಿ. ಮೊದಲೆಲ್ಲಾ ಶಿವಮೊಗ್ಗದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಗೊತ್ತಿದೆ. ಹಾಗಾಗಿ, ಪ್ರೀಕಾಷನ್ ತಗೊಂಡಿದ್ವಿ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.
ಅವ್ರು ಕಲ್ಲು ಹೊಡೆದಿದ್ದಾರೆ ಅಂತ ಇವ್ರು ಹೊಡೆದಿದ್ದಾರೆ
ಕಲ್ಲು ತೂರಾಟ ಮಾಡಿರುವ 50 ಜನರನ್ನು ಅರೆಸ್ಟ್ ಮಾಡಿದ್ದೇವೆ. ಸಿಸಿಟಿವಿಯಲ್ಲಿ ಕಂಡವರನ್ನು ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಗಲಭೆ ಈಗ ಇಲ್ಲ. ನಿನ್ನೆಯೇ ಎಲ್ಲವೂ ಮುಗಿದು ಹೋಗಿದೆ. ಹೊರರಾಜ್ಯದಿಂದ ಹೊರ ಜಿಲ್ಲೆಯಿಂದಲೂ ಯಾರು ಬಂದಿಲ್ಲ. ಯಾರು ಹೊರಗಡೆಯಿಂದ ಬರಬಾರದು ಅಂತ ಸ್ಕ್ರೀನಿಂಗ್ ಮಾಡಿದ್ದಿವಿ. ಬೇಕಂತ ಆಗಿರಬಹುದು, ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರು ಕಲ್ಲು ಹೊಡೆದಿದ್ದಾರೆ. ಸೆಲೆಕ್ಟಿವ್ ಆಗಿ ಅಂತ ಪೊಲೀಸರಿಗೆ ಏನು ಹೊಡೆದಿಲ್ಲ. ಸಾಮೂಹಿಕ ಕಲ್ಲು ತೂರಿದಾಗ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಅವರು, ಇವರು ಅಂತ ನಿಮಗೆ ವಿವರಿಸುವ ಅಗತ್ಯತೆ ಇಲ್ಲ ತಿಳಿದುಕೊಳ್ಳಿ ಎಂದು ಹೇಳಿದರು.