Monday, December 23, 2024

ಹಾಸ್ಯ ನಟ ಬ್ಯಾಂಕ್​ ಜನಾರ್ಧನ್​ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು : ಕನ್ನಡದ ಹಿರಿಯ ಹಾಸ್ಯ ನಟ ಬ್ಯಾಂಕ್​ ಜನಾರ್ಧನ್​ಗೆ ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೆನ್ನೆ ಸಂಜೆ ಹಿರಿಯ ಹಾಸ್ಯ ನಟ ಬ್ಯಾಂಕ್​ ಜನಾರ್ಧನ್​ ಗೆ ಹೃದಯಾಘಾತ ಸಂಭವಿಸಿದೆ. ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಮಾಡಲಿದ್ದಾರೆ.

ಇದನ್ನೂ ಓದಿ: ಪೊಲೀಸರಿಗೆ ತರಿಸಿದ್ದ ತಿಂಡಿಯಲ್ಲಿ ಸಿಕ್ತು ಇಲಿ!

ಈ ವೇಳೆ ತಮ್ಮ ಸ್ನೇಹಿತನನ್ನು ನೋಡಲು ಹಿರಿಯ ಹಾಸ್ಯ ನಟರು ಹಾಗೂ ಪೋಷಕರ ನಟರಾದ ವೈದ್ಯನಾತ್​  ಬಿರಾದರ್​ ಸೇರಿದಂತೆ ಹಲವು ಕಲಾವಿದರು ಆಸ್ಪತ್ರೆಗೆ ಆಗಮಿಸಿದ್ದಾರೆ. ಆದರೆ, ಬ್ಯಾಂಕ್​ ಜನಾರ್ಧನ್​ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರ ಭೆಟಿಗೆ ವೈದ್ಯರು ಅವಕಾಶ ಕಲ್ಪಿಸಿಲ್ಲ ಎನ್ನಲಾಗಿದೆ.

RELATED ARTICLES

Related Articles

TRENDING ARTICLES