ಚಾಮರಾಜನಗರ : ವಿಘ್ನ ನಿವಾರಕನ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಮೂರು ಗಣೇಶ ಮೂರ್ತಿಗಳ ವಿಸರ್ಜನೆ ಅರ್ಥಪೂರ್ಣವಾಗಿ ನೇರವೇರಿತು.
ನಗರದ ಸೇವಾ ಭಾರತಿ ಸಂಸ್ಥೆಯಿಂದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಮೂರು ಗಣೇಶ ಮೂರ್ತಿಗಳನ್ನು ಏಕಕಾಲಕ್ಕೆ ನೇರವೇರಿಸಲಾಯಿತು. ಹಾಗೂ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಹಿಂದುಪರ ಸಂಘಟನೆ ಕಾರ್ಯಕರ್ತರು ವಿನಾಯಕನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿನಾಯಕನ ಮೆರವಣಿಗೆಯನ್ನು ನಾಯಕರ ಬೀದಿ, ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ರಥದ ಬೀದಿ ಮಾರ್ಗವಾಗಿ ಕೊಳದ ಗಣಪತಿ ದೇವಾಲಯವರೆಗೆ ಮೆರವಣಿಗೆ ಸಾಗಿ, ಗಣೇಶನ ವಿಸರ್ಜನೆ ಮಾಡಲಾಯಿತು. ಇನ್ನು ರಸ್ತೆಯುದ್ದಕ್ಕೂ ಮಕ್ಕಳು ಕೋಲಾಟ ಹಾಗೂ ಹುಲಿ ಕುಣಿತದ ಮೂಲಕ ಜನರ ಗಮನವನ್ನು ಸೆಳೆದರು.
ಇದನ್ನು ಓದಿ : ಬಾಲಕನ ಮೇಲೆ ಮಸೀದಿ ಮೌಲ್ವಿಯಿಂದಲೇ ಲೈಂಗಿಕ ದೌರ್ಜನ್ಯ
ಜೊತೆಗೆ ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಸೀರೆಯುಟ್ಟಿದ್ದು, ಮೆರವಣಿಗೆ ಮತ್ತಷ್ಟು ಮೆರಗು ನೀಡಿತ್ತು. ಜಿಲ್ಲಾ ಕೇಂದ್ರದಲ್ಲಿ ಈವರೆಗೂ ಸುಮಾರು 60 ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸರು ಬಿಗಿ ಭದ್ರತೆಯನ್ನು ವಹಿಸಿದ್ದರು.