ದೆಹಲಿ : ದೆಹಲಿಯ ಹಳೇ ಸಂಸತ್ ಭವನಕ್ಕೆ ಭಾವನಾತ್ಮಕ ವಿದಾಯ ಹೇಳುವ ಸಮಯ ಸಮೀಪಿಸುತ್ತಿದ್ದು ಹಳೇ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ.
ನಾಳೆಯಿಂದ ನೂತನ ಸಂಸತ್ ಭವನದಲ್ಲಿ ವಿಶೇಷ ಕಲಾಪಗಳು ನಡೆಯಲಿದೆ, ಇಂದು ಹಳೇ ಕಟ್ಟಡದಲ್ಲಿ ಕಡೇಯ ಕಲಾಪ ನಡೆಯಲಿದೆ ಇದರೊಂದಿಗೆ 96 ವರ್ಷಗಳ ಸುಧೀರ್ಘ ಇತಿಹಾಸವಿರುವ ಕಟ್ಟಡವು ಇತಿಹಾಸ ಪುಟಗಳನ್ನು ಸೇರಲಿದೆ.
ಇದನ್ನೂ ಓದಿ: ಗಣೇಶೋತ್ಸವಕ್ಕೆ ಜೂನಿಯರ್ ಧ್ರುವ ಸರ್ಜಾ ಎಂಟ್ರಿ : ಫಲಿಸಿದ ಪೂಜಾಫಲ!
1927, ಜನವರಿ 18ರಲ್ಲಿ ಉದ್ಘಾಟನೆಯಾಗಿದ್ದ ಸಂಸತ್ ಕಟ್ಟಡ ವಸಾಹತುಶಾಹಿ ಇತಿಹಾಸ, ಎರಡನೇ ಜಾಗತಿಕ ಮಹಾಯುದ್ಧ, ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ, ಸಂವಿಧಾನದ ಅಳವಡಿಕೆ ಹೀಗೆ ಹಲವು ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಸಾಕ್ಷಿಗಿತ್ತು.
ಮುಂಗಾರು ಅಧಿವೇಶನವೇ ಹಳೇ ಕಟ್ಟಡದ ಕೊನೇ ಕಲಾಪ ಇನ್ಮುಂದೆ ಸಾಮಾನ್ಯ ಕಲಾಪಗಳು ಈ ಕಟ್ಟಡದಲ್ಲಿ ನಡೆಯುವುದಿಲ್ಲ, ಹಲವು ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾದ ಕಟ್ಟಡ ಇಂದು ವಿಧಾಯ.