Wednesday, November 20, 2024

ನೀರಿಲ್ಲ, ಕ್ಲೀನ್ ಇಲ್ಲ, ಓಪನ್ ಆಗಲ್ಲ : ಹಳ್ಳ ಹಿಡಿದ ಬಿಬಿಎಂಪಿ E ಟಾಯ್ಲೆಟ್!

ಬೆಂಗಳೂರು : ಬಿಬಿಎಂಪಿಯ ಇ ಟಾಯ್ಲೆಟ್ ಯೋಜನೆ ಹಳ್ಳ ಹಿಡಿದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಲಾಗಿರುವ ಇ ಟಾಯ್ಲೆಟ್ ಗಳು ಈಗ ಜನರ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿದೆ.

ನೀರಿಲ್ಲ, ಕ್ಲೀನ್ ಇಲ್ಲ, ಓಪನ್ ಆಗಲ್ಲ. ಹೀಗೆ ಸಾರ್ವಜನಿಕರ ದುಡ್ಡನ್ನು ಎಷ್ಟು ಸಾಧ್ಯವೋ ಅಷ್ಟರ‌ ಪ್ರಮಾಣದಲ್ಲಿ ಪಾಲಿಕೆ‌ ಅಧಿಕಾರಿಗಳು ಪೋಲು ಮಾಡುತ್ತಿದ್ದಾರೆ. ಈವರೆಗೆ ಈ ಯೋಜನೆಗೆ ಪಾಲಿಕೆ ಬರೋಬ್ಬರಿ 30 ಕೋಟಿಗೂ ಅಧಿಕ ಹಣ ವ್ಯಯಮಾಡಿದೆ.

2015ರಲ್ಲಿ ಬಿಬಿಎಂಪಿ ಸಾರ್ವಜನಿಕರ ಅನುಕೂಲಕ್ಕೆಂದು ನಗರದ ಹಲವು ಭಾಗದಲ್ಲಿ ಇ ಟಾಯ್ಲೆಟ್ ಸ್ಥಾಪನೆ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೆ 229 ಇ ಟಾಯ್ಲೆಟ್ ಅನ್ನು ಪಾಲಿಕೆ ಸ್ಥಾಪಿಸಿದೆ. ಈ 229 ಇ ಟಾಯ್ಲೆಟ್ ಗಳನ್ನು ಸ್ಥಾಪಿಸಲು ಪ್ರತಿ ಶೌಚಾಲಯಕ್ಕೆ 5 ಲಕ್ಷದಂತೆ 11.55 ಕೋಟಿ ಖರ್ಚು ಮಾಡಿದೆ. ಅಲ್ಲದೆ ಪ್ರತಿ ಶೌಚಾಲಯಕ್ಕೆ ಮಾಸಿಕ ನಿರ್ವಹಣೆಗೆ 3,200 ರೂಪಾಯಿ ಪಾವತಿಯಾಗುತ್ತಿದೆ.

ಈವರೆಗೆ ಒಟ್ಟಾರೆ ಇ ಟಾಯ್ಲೆಟ್ ಯೋಜನೆಗೆ ಬಿಬಿಎಂಪಿ 30 ಕೋಟಿಗೂ ಅಧಿಕ ವೆಚ್ಚ ಮಾಡಿದೆ. ಆದರೆ, ಓಪನ್‌ ಆದಗಿಂದ ಈವರೆಗೂ ಮೂರು, ನಾಲ್ಕು ದಿನಗಳು ಮಾತ್ರ ಅಷ್ಟೇ ಉಪಯೋಗ ಆಗಿದ್ದು ನಂತರ ಉಪಯೋಗಕ್ಕೆ ಬಂದಿಲ್ಲ ಅಂತ ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಆಯುಕ್ತರ ಬಳಿ ಅಂಕಿ, ಅಂಶವೇ ಇಲ್ಲ!

2015ರಲ್ಲಿ ಇ ರಾಮ್ ಸೊಲ್ಯೂಷನ್ ಎನ್ನುವ ಖಾಸಗಿ ಸಂಸ್ಥೆಗೆ ಪಾಲಿಕೆ ಗುತ್ತಿಗೆ ಕೊಟ್ಟಿತ್ತು. ನಗರದ ಎಲ್ಲಾ ಟಾಯ್ಲೆಟ್ ಗಳು ಈಗ ಅದ್ವಾನ ಸ್ಥಿತಿಯಲ್ಲಿದೆ. ಕ್ಲೀನ್ ಇಲ್ಲ. ನೀರಿಲ್ಲ. ಬಹುತೇಕ ಟಾಯ್ಲೆಟ್ ಗಳು ಓಪನ್ ಆಗೋದೇ ಇಲ್ಲ. ಇಷ್ಟೊಂದು ಕೋಟಿ ಖರ್ಚು ಮಾಡಿ ಸಾರ್ವಜನಿಕರ ಅನುಕೂಲಕ್ಕೆ ಜಾರಿ ಮಾಡಿದ ಯೋಜನೆಯೊಂದು ಈ ರೀತಿ ಆಳೂರಕೊಂಪೆಯಾಗಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಎಲ್ಲಾ ಇ ಟಾಯ್ಲೆಟ್ ಗಳು ಎಷ್ಟು ಚಾಲ್ತಿಯಾಲ್ಲಿವೆ? ಎಷ್ಟು ಚಾಲ್ತಿಯಲ್ಲಿಲ್ಲ ಎಂಬುದರ ಬಗ್ಗೆ ಮುಖ್ಯ ಇಂಜಿನಿಯರ್ ಕರೆದು ಮಾಹಿತಿ ಪಡೆಯುತ್ತಾನೆ ಅಂತ ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಬಳಿಯೂ ಇದೇ ಗೋಳು

ಇನ್ನೂ ಈಗಾಗಲೇ ಜನರ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿ ತುಕ್ಕು ಹಿಡಿದಿವೆ. ಆದ್ರೆ ಪಾಲಿಕೆ ಮುಂದಿನದಿನಗಳಲ್ಲಿ ನಗರದಲ್ಲಿ ಇ ಟಾಯ್ಲೆಟ್ ನಿರ್ಮಾಣ ಮಾಡ್ತೇವೆ ಅಂತ ಹೇಳುತ್ತಿದೆ. ಈ ಬಗ್ಗೆ ಪವರ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ. ಕ್ವಿನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿ ಸ್ಥಾಪಿಸಲಾಗಿರುವ ಇ ಟಾಯ್ಲೆಟ್ ಗಳು ಈ ಯೋಜನೆ ಹಳ್ಳ ಹಿಡಿದಿದೆ ಎನ್ನುವುದಕ್ಕಿರುವ ತಾಜಾ ಉದಾಹರಣೆ.

RELATED ARTICLES

Related Articles

TRENDING ARTICLES