ಬಾಗಲಕೋಟೆ : ಒಣದ್ರಾಕ್ಷಿ ಬೆಲೆ ಕುಸಿತದ ಹಿನ್ನೆಲೆ ಬೆಂಬಲ ಘೋಷಿಸುವಂತೆ ಅಗ್ರಹಿಸಿ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಕ್ರಾಸ್ ಬಳಿ ಸಮಾವೇಶ ನಡೆಸಿರುವ ದ್ರಾಕ್ಷಿ ಬೆಳೆಗಾರರು.
ಒಣದ್ರಾಕ್ಷಿ ಬೆಲೆ ಕುಸಿತದ ಹಿನ್ನೆಲೆ ದ್ರಾಕ್ಷಿ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಪರಿಣಾಮ ಪ್ರತಿ ಕೆಜಿ ಒಣದ್ರಾಕ್ಷಿಗೆ 250 ರೂ. ಬೆಂಬಲ ಬೆಲೆಯನ್ನು ಘೋಷಣೆ ಮಾಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿ ಸಮಾವೇಶ ಹಮ್ಮಿಕೊಂಡಿರುವ ದ್ರಾಕ್ಷಿ ಬೆಳೆಗಾರರು.
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರಿಂದ ರೈತರು ಕಂಗಲಾಗಿದ್ದು, ನಾಡಿನ ರೈತ ಪರ ಮತ್ತು ಪ್ರಗತಿಪರ ರೈ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಈ ಸಮಾವೇಶವನ್ನು ಹಮ್ಮಿಕೊಂಡು, ದ್ರಾಕ್ಷಿ ಬೆಳೆಗಾರರ ನೆರವಿಗೆ ಬರುವಂತೆ ಅಗ್ರಹಿಸಿದ್ದಾರೆ.
ಇದನ್ನು ಓದಿ : ಹಿಂದೂಗಳು ಒಂದಾದರೆ ಬಿಜೆಪಿಗೆ ಲಾಭ : ಶಾಸಕ ಯತ್ನಾಳ್
ಅಷ್ಟೇ ಅಲ್ಲದೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಕೂಡ ದ್ರಾಕ್ಷಿ ಬೆಳೆಗಾರರ ಪರವಾಗಿ ಸರ್ಕಾರಕ್ಕೆ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.