ಬೆಂಗಳೂರು : ನಾವು ಭಾರತ್ ಜೊಡೋ ಯಾತ್ರೆ ಮಾಡಿದ್ದೇವೆ. ಜನರಲ್ಲಿ ಗೊಂದಲ ಸೃಷ್ಟಿಗೆ ಈ ರೀತಿ ಮಾಡಿದ್ದಾರೆ. ಹಿಟ್ಲರನ ಮಾದರಿಯಂತೆ ನಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕುಟುಕಿದರು.
I.N.D.I.Aಗೆ ಭಾರತ ಎಂದು ನಾಮಕರಣ ವಿಚಾರವಾಗಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ಚರ್ಚೆ ತಪ್ಪಿಸುವ, ಬೆಲೆ ಏರಿಕೆ ಚರ್ಚೆ ತಪ್ಪಿಸಲು ಈ ಪ್ರಯತ್ನ ಇದು. ಜನರನ್ನು ದಾರಿ ತಪ್ಪಿಸೋಕೆ ಸಾಧ್ಯವಿಲ್ಲ. ಜನ ಬಹಳ ವಿಚಾರವಂತರಿದ್ದಾರೆ. ಬದ್ಧತೆ ಇದ್ದರೆ ಆರ್ಥಿಕ ಸಮಸ್ಯೆ ಬಗ್ಗೆ ಮಾತನಾಡಿ ಎಂದು ಚಾಟಿ ಬೀಸಿದರು.
ಬಡವರಿಗೆ 15 ಲಕ್ಷ ಹಾಕ್ತೇವೆ ಅಂದ್ರು ಹಾಕಲಿಲ್ಲ. ೨ ಕೋಟಿ ಉದ್ಯೋಗ ಅಂದ್ರು, ಮಾಡಲಿಲ್ಲ. ಬೆಲೆ ನಿಯಂತ್ರಣ ಅಂದ್ರು, ಮಾಡೋಕೆ ಆಗಲಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಲಿಲ್ಲ. ಈಗ ಒನ್ ನೇಷನ್ ಒನ್ ಎಲೆಕ್ಷನ್ ಅಂತಾರೆ. 9 ವರ್ಷದಿಂದ ಯಾಕೆ ಮಾಡಲಿಲ್ಲ ಹೇಳಿ. ಮಹಿಳಾ ಮೀಸಲಾತಿ ಮಾಡ್ತೇವೆ ಅಂತಾರೆ ಯಾವಾಗ? ಎಂದು ಪ್ರಶ್ನಿಸಿದರು.
ಭಾರತ ಹಳೆಯ ಹೆಸರೇ ಅಲ್ವೇ?
I.N.D.I.Aವನ್ನು ಭಾರತ್ ಎಂದು ಮರುನಾಮಕರಣ ಮಾಡ್ತಿದ್ದಾರೆ. ಭಾರತವನ್ನು ಹಲವು ಹೆಸರಿನಿಂದ ಕರೆಯುತ್ತಾರೆ. ಭಾರತ, ಇಂಡಿಯಾ, ಹಿಂದೂಸ್ತಾನ್, ಆರ್ಯಾವತ ಎಂದು ಕರೆಯುತ್ತಾರೆ. ಇನ್ನು ಭಾರತ ಅನ್ನೋದು ಹಳೆಯ ಹೆಸರೇ ಅಲ್ವೇ? ಎಂದು ವಿ.ಎಸ್ ಉಗ್ರಪ್ಪ ಹೇಳಿದರು.