Monday, November 18, 2024

ಹೆಚ್​.ಡಿ ರೇವಣ್ಣಗೆ ಹೈಕೋರ್ಟ್​ ಸಮನ್ಸ್​ ಜಾರಿ!

ಬೆಂಗಳೂರು: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಹೈಕೋರ್ಟ್‌ ಸಮನ್ಸ್ ಜಾರಿಯಾಗಿದ್ದು, ಸೆಪ್ಟೆಂಬರ್ 25ಕ್ಕೆ ಮುಂದಿನ ವಿಚಾರಣೆ ನಿಗಧಿಯಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಸಂಸದ ಸ್ಥಾನದಿಂದ ಹೈಕೋರ್ಟ್ ಅನರ್ಹಗೊಳಿಸಿತ್ತು. ಈ ಶಾಕ್‌ನಿಂದ ಹೊರ ಬರುವ ಮೊದಲೇ ಹೆಚ್‌.ಡಿ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಬಿಜೆಪಿಯಿಂದ ಇಡೀ ದೇಶ ಮಣಿಪುರದಂತೆ ಬದಲಾಗಲಿದೆ : ಎಂ.ಕೆ ಸ್ಟಾಲಿನ್​

ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರು ಹಣ, ಕೋಳಿ, ಮಾಂಸ ಹಂಚಿ ಚುನಾವಣೆ ಗೆದ್ದಿರುವ ಆರೋಪ ಕೇಳಿ ಬಂದಿತ್ತು. ದೇವರಾಜೇಗೌಡ ಎಂಬುವವರಿಂದ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಕೆಯಾಗಿದ್ದು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ತಿಂಗಳೇ ಸಮನ್ಸ್‌ ಜಾರಿ ಮಾಡಿತ್ತು.

ಕಳೆದ ತಿಂಗಳು ಹೈಕೋರ್ಟ್ ಜಾರಿಗೊಳಿಸಿದ್ದ ಸಮನ್ಸ್‌ ಅನ್ನು ಹೆಚ್‌.ಡಿ ರೇವಣ್ಣ ಅವರು ಸ್ವೀಕರಿಸಿರಲಿಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿ ಮೂಲಕ ರೇವಣ್ಣ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಇದೇ ಸೆಪ್ಟೆಂಬರ್​ 25ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

 

 

RELATED ARTICLES

Related Articles

TRENDING ARTICLES