ಬೆಂಗಳೂರು : ಇನ್ಸ್ಟಾಗ್ರಾಮ್ನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಚೆಂದ ಕಾಣಿಸೋ ಆಂಟಿರನ್ನ ಟಾರ್ಗೆಟ್ ಮಾಡುತ್ತಿದ್ದ ಕದೀಮ.
ಅಸ್ಸಾಂ ಮೂಲದ ಫೈಸಲ್ ಆರೋಪಿ. ಎಂಬ ವ್ಯಕ್ತಿಯೊಬ್ಬ ಆಂಟೀರನ್ನ ಬೀಳಿಸೋಕೆ ಅಂತಾನೆ ಇನ್ಸ್ಟಾಗ್ರಾಮ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದನು. ಅಷ್ಟೇ ಅಲ್ಲದೆ ಹುಡುಗಿಯರನ್ನು ಬಿಟ್ಟು ಪ್ರೊಫೈಲ್ನಲ್ಲಿ ಸುಂದರವಾದ ಆಂಟಿಯರು ಕಂಡ್ರೆ ರಿಕ್ವೆಸ್ಟ್ ಕಳುಹಿಸಿ, ಅವರು ಅಕ್ಸೆಪ್ಟ್ ಮಾಡಿದ್ರೆ ಸಾಕು ಕಲರ್ ಕಲರ್ ಡೈಲಾಗ್ ಹೊಡೆದು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು.
ಇದನ್ನು ಓದಿ : ಘಟಪ್ರಭಾ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ
ಅಷ್ಟೇ ಅಲ್ಲದೆ ಹೆಣ್ಣುಮಕ್ಕಳ ಫ್ರೀಡಂ ಮತ್ತು ಅಂಕಲ್ಗಳ ವೀಕ್ನೆಸ್ ಬಗ್ಗೆ ಮಾತಾಡುತ್ತ ತನಗೆ ಹತ್ರವಾಗುವಂತೆ ಮಾಡಿಕೊಳ್ಳುತ್ತಿದ್ದನು. ಬಳಿಕ ಬಲೆಗೆ ಬಿದ್ದ ಆಂಟಿಯರ ಬಳಿ ಖಾಸಗಿ ಜಾಗಗಳಿಗೆ ಕರೆದು ಲೈಗಿಂಕ ಸಂಪರ್ಕಕ್ಕೆ ಗಾಳ ಹಾಕುತ್ತಿದ್ದ ಕಿಲಾಡಿ.
ಈ ವೇಳೆ ಅವರ ಜೊತೆ ಮಾತನಾಡುತ್ತಿದ್ದ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ, ಬಳಿಕ ಲಕ್ಷ ಲಕ್ಷ ಹಣ ಕೇಳಿ ಪೀಡಿಸುತ್ತಿದ್ದನು. ಇದರ ಬೆನ್ನಲ್ಲೇ ಓರ್ವ ಮಹಿಳೆಗೆ ಇದೇ ರೀತಿ ಹಣ ಕೊಡದಿದ್ರೆ ಗಂಡನಿಗೆ ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದ್ದನು. ಬಳಿಕ ಆ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಚೆನ್ನೈಗೆ ಕರೆದಿದ್ದ ಆರೋಪಿ.
ಈ ಬಗ್ಗೆ ಭಯಗೊಂಡ ಮಹಿಳೆ ಫೈಸಲ್ ವಿರುದ್ಧ ದೂರು ನೀಡಿದರು. ಬಳಿಕ ಮಾಹಿತಿ ಆಧರಿಸಿ ಚೆನ್ನೈನಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಇದೇ ರೀತಿ ಹಲವರಿಗೆ ವಂಚಿಸಿದ್ದು, ಸದ್ಯ ಆರೋಪಿ ಮೊಬೈಲ್ನ್ನು ವಶಪಡೆದು ಪರಿಶೀಲನೆ ನಡೆಸಿರುವ ಪೋಲಿಸರು.