Saturday, November 23, 2024

ಜಾರ್ಖಂಡ್​ನಲ್ಲೂ ಜಾರಿದ ಬಿಜೆಪಿ! ಒಂದು ವರ್ಷದಲ್ಲಿ 5 ರಾಜ್ಯದಲ್ಲಿ ಮುದುಡಿದ ಕಮಲ

ಬೆಂಗಳೂರು : ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು  ಘೋಷಣೆ ಮಾಡಿದ ಬಳಿಕ ಅಂದರೆ 2014 ರ ಲೋಕಸಭೆ ಚುನಾವಣೆಯಿಂದ ಶುರುವಾದ ಬಿಜೆಪಿಯ ವಿಜಯ ಯಾತ್ರೆಗೆ ಬ್ರೇಕ್ ಬಿದ್ದಿದ್ದೆ.

2014ರಲ್ಲಿ ಒಟ್ಟು 7 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ಭಾರತೀಯ ಜನತಾ ಪಾರ್ಟಿ , 2018 ರ ವೇಳೆಗೆ 21 ರಾಜ್ಯಗಳಲ್ಲಿ ತನ್ನ ಅಧಿಪತ್ಯ ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದು, ವಿರೋಧ ಪಕ್ಷಗಳ ಅಸ್ಥಿತ್ವವನ್ನು ಅಲುಗಾಡಿಸಿದ್ದು ಗೊತ್ತೇ ಇದೆ .

ಮೋದಿ-ಶಾ ಜೋಡಿ ಹೋದಲೆಲ್ಲಾ ವಿಜಯ ಪಾತಕೆ ಹಾರಿಸಿದ್ದ ಬಿಜೆಪಿ, ಹಂತ ಹಂತವಾಗಿ ರಾಜ್ಯಗಳಲ್ಲಿ ಅಧಿಕಾರ ಹಿಡಿದು ಸಾಗಿತ್ತು. 2015ರಲ್ಲಿ 13 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ,2016ರ ಹೊತ್ತಿಗೆ 15 ರಾಜ್ಯಗಳಲ್ಲಿ ರಾಜ್ಯಭಾರ ಶುರುವಿಟ್ಟಿತು. 

2017ರಲ್ಲಿ 19 ರಾಜ್ಯಗಳಲ್ಲಿ ಕೇಸರಿ ಬಾವುಟ ಹಾರಾಟ ಮಾಡಿದ್ದಲ್ಲದೆ ಪ್ರಾದೇಶಿಕ ಪಕ್ಷಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ. 2018 ಭಾರತದಲ್ಲಿ ಕೇಸರಿ ಯುಗ, ಬಿಜೆಪಿ ಶಕೆ ಅಂತಾನೆ ಕರೆಯಲ್ಪಟ್ಟಿತ್ತು. ಸುಮಾರು 21 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಮೀಪದಲ್ಲಿದ್ದೇವೆ ಎಂದು ಬೀಗಿತ್ತು.

ಆದರೆ ಈಗ ಬಿಜೆಪಿ ದೇಶದಲ್ಲಿ 31 % ಅಧಿಕಾರವನ್ನು ಕಳೆದುಕೊಂಡಿದೆ. 2018ರಲ್ಲಿ  71% ಭೌಗೋಳಿಕ ಭಾರತದ ಭೂಪಟದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ , 2018 ರ ಬಳಿಕ ಕೇವಲ 40ರಷ್ಟು ಜನ ವಾಸಿಸುವ ಭಾಗದಲ್ಲಿ ಅಧಿಕಾರವನ್ನು ಮಾಡುತ್ತಿದೆ. 2018ರ ಬಳಿಕ ಬಿಜೆಪಿ  ಕಳೆದುಕೊಂಡಿರುವುದೇ ಜಾಸ್ತಿ! ಇದಕ್ಕೆ ತಾಜಾ ಉದಾಹರಣೆ 2019ರಲ್ಲಿ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 1 ರಾಜ್ಯದಲ್ಲಿ ಮಾತ್ರ . ಪ್ರಸ್ತುತ ಜಾರ್ಖಂಡ್ ರಾಜ್ಯದಲ್ಲಿಯೂ ಅಧಿಕಾರ ಕಳೆದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್​ಗಢ ಕಳೆದುಕೊಂಡಿತ್ತು. ಈಗ ಜಾರ್ಖಂಡ್​ನಲ್ಲೂ ಕಮಲ ಮುದುಡಿದೆ. 

RELATED ARTICLES

Related Articles

TRENDING ARTICLES