ಮಂಗಳೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆಯುಕೈಗೊಂಡಿರುವ ಚಂದ್ರಯಾನ-3 ಯೋಜನೆಯ ನಿರ್ಣಾಯಕ ಹಂತಕ್ಕೆ ಬಂದಿದೆ. ಆ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಮಹಾ ಪೂಜೆ ಹಾಗೂ ಕಾರ್ತಿಕ ಪೂಜೆಗಳನ್ನು ನೆರವೇರಿಸಲಾಗಿದ್ದು, ಈ ಯೋಜನೆಯು ಯಶಸ್ವಿಯಾಗಿ ಇಸ್ರೋ ವಿಜ್ಞಾನಿಗಳಿಗೆ ಮಹತ್ವದ ಸಾಧನೆಯಾಗಲಿ.
ಭಾರತದ ಈ ಪ್ರಯತ್ನಕ್ಕೆ ವಿಶ್ವ ಮಾನ್ಯತೆ ದೊರಕಲಿ ಎಂಬ ಕಾರಣದಿಂದಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆಯೇ ಎಂಬುದನ್ನು ಪರೀಕ್ಷಿಸಲು ಈ ಯೋಜನೆಯು ಕೇಂದ್ರೀಕೃತವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆಯೇ ಎಂಬುದನ್ನು ಪತ್ತೆ ಹಚ್ಚಲು ಈ ಯೋಜನೆಯಡಿ ಆಕಾಶಕಾಯವನ್ನು ಹಾರಿಬಿಡಲಾಗಿದೆ.
ಪ್ರಧಾನಿ ಮೋದಿ ಪ್ರಾರ್ಥನೆ
ಚಂದ್ರನತ್ತ ಇಳಿಯಲು ಭಾರತದ ನೌಕೆ ಯಶಸ್ವಿಯತ್ತ ಸಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಸುರಕ್ಷಿತ ಇಳಿಯುವಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ. ಬಾಹ್ಯಾಕಾಶ ನೌಕೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಚಂದ್ರನತ್ತ ಕಾಲಿಡುತ್ತಿರುವ ನಮ್ಮ ನೌಕೆಯ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಇಸ್ರೋ ಸಾಧನೆ ಬಗ್ಗೆ ಶುಭ ಕೋರಿದ್ದಾರೆ.