ತುಮಕೂರು : ಮಳೆಗಾಗಿ ಕಾಯುತ್ತ ಕುಳಿತಿರುವ ರೈತರು, ವರುಣನ ಆಗಮನಕ್ಕೆ ಮೊರೆ ಇಟ್ಟು ಸಂಪ್ರದಾಯಿಕ ಆಚರಣೆ ಮಾಡುತ್ತಿರುವ ಅನ್ನದಾತರು ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ಕೈ ಕೊಟ್ಟಿರುವ ಮಳೆ ಹಿನ್ನೆಲೆ ರೈತರು ಬೆಳೆದಿರುವ ಬೆಳೆಗಳೆಲ್ಲ ಒಣಗಿ ಹೋಗುತ್ತಿದೆ. ಬೆಳೆಗಳನ್ನು ಕಳೆದುಕೊಂಡ ಅನ್ನದಾತರು ಮಳೆರಾಯನ ಮೊರೆ ಹೋಗಿದ್ದಾರೆ. ಜಮೀನಿನಲ್ಲಿ ಬೆಳೆಗಳಲ್ಲೇ ಒಣಗಿ ಹೋಗಿರುವುದನ್ನು ಕಂಡು ರೈತರು ಕಂಗಾಲು.
ಗ್ರಾಮದ ಜನರು ಬೇರೆ ದಾರಿ ಇಲ್ಲದೆ ಮಳೆರಾಯನಿಗಾಗಿ ಮಣ್ಣಿನ ಆಕೃತಿ ಮಾಡಿ ಅದನ್ನು ಸಂಪ್ರದಾಯಿಕವಾಗಿ ಪೂಜೆಯನ್ನು ಸಲ್ಲಿಸಿದರು. ಅಷ್ಟೇ ಅಲ್ಲದೆ ಮಳೆ ಹಾಡುಗಳನ್ನು ಹಾಡುವ ಮೂಲಕ ಸಂಪ್ರದಾಯಿಕ ಪೂಜೆ ಮತ್ತು ವಿಭಿನ್ನ ರೀತಿಯ ಆಚರಣೆಗಳನ್ನು ಮಾಡಿ ಮಳೆರಾಯನ ಮೊರೆ ಹೋಗಿದ್ದಾರೆ.
ಇದನ್ನು ಓದಿ : ಬಾಳೆಹಣ್ಣಿಗೆ ಪುಲ್ ಡಿಮ್ಯಾಂಡ್ ; ರೈತನ ಮೇಲೆ ಮುಗಿಬಿದ್ದ ವರ್ತಕರು
ಬಳಿಕ ಮಣ್ಣಿನ ಆಕೃತಿ ಮಾಡಿದ್ದ ಮಳೆರಾಯನನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆಯನ್ನು ಮಾಡಿದ ರೈತರು.