ತುಮಕೂರು : ಶ್ರಾವಣ ಮಾಸದ ಹಿನ್ನೆಲೆ ಬಾಳೆಹಣ್ಣು ಕೊಳ್ಳಲು, ರೈತನ ಮೇಲೆ ಮುಗಿಬಿದ್ದಿರುವ ವರ್ತಕರು ಘಟನೆ ತಿಪಟೂರು ಸಮೀಪದ ಕಾರೇಹಳ್ಳಿ ಸಂತೆಯಲ್ಲಿ ನಡೆದಿದೆ.
ಶ್ರಾವಣ ಮಾಸ ಹಾಗೂ ಇಂದು ನಾಗರ ಪಂಚಮಿ ಹಬ್ಬ ಇರುವ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಹಣ್ಣು, ಹೂವುಗಳನ್ನು ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಅದರ ಬೆನ್ನಲ್ಲೇ ನಿನ್ನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಗ್ರಾಮದಲ್ಲಿ ನಡೆಯುತ್ತಿದ್ದ ಸಂತೆಯಲ್ಲಿ ಬಾಳೆಹಣ್ಣು ಮಾರುಕಟ್ಟೆಗೆ ಹೋಗುವ ಮುನ್ನವೇ ರೈತನ ಮೇಲೆ ಮುಗಿಬಿದ್ದಿರುವ ವರ್ತಕರು.
ಇದನ್ನು ಓದಿ : ನಾಗರ ಪಂಚಮಿ ದಿನ ; ಈ ರಾಶಿ ಜನರಿಗೆ ಇಂದು ಶುಭ ಯೋಗ
ಟಮೋಟ ಹಾಗೂ ಈರುಳ್ಳಿ ಬಳಿಕ ಈಗ ಬಾಳೆಹಣ್ಣಿಗೂ ಡಿಮ್ಯಾಂಡ್ ಜಾಸ್ತಿಯಾಗಿದೆ.
ಬಳಿಕ ವರ್ತಕರು ಹೆಚ್ಚಾಗಿ ಮುಗಿಬಿದ್ದಿದ್ದರಿಂದ ರೈತನು ನಡುರಸ್ತೆಯಲ್ಲಿಯೇ ಬಾಳೆಹಣ್ಣನ್ನು ಹರಾಜು ಕೂಗಿದರು. ಬಾಳೆಗೊನೆಗೆ ಕೆಜಿ 120 ರೂಪಾಯಿ ಬೆಲೆಗೆ ಹರಾಜು ಕೂಗಿದ ರೈತರು. ಈ ವೇಳೆ ಜನರು ಬಾಳೆಗೊನೆಯ ಹರಾಜಿನ ವಿಡಿಯೋ ಸೆರೆ ಹಿಡಿದಿದ್ದು, ತಿಪಟೂರು ಭಾಗದ ವಾಟ್ಸಪ್ ಗ್ರೂಪ್ನಲ್ಲಿ ಪುಲ್ ವೈರಲ್ ಆಗಿದೆ.