ಬೆಂಗಳೂರು : ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ನತ್ತ ಮುಖಮಾಡುತ್ತಿದ್ದಾರೆ ಎನ್ನುವ ಅನುಮಾನಕ್ಕೆ ಮೂಲ ಬಿಜೆಪಿಗರ ನಡೆ ಕಾರಣ ಎನ್ನುವ ಸ್ಪೋಟಕ ಮಾಹಿತಿ ಪವರ್ ಟಿವಿ ಗೆ ಲಭ್ಯವಾಗಿದೆ.
ಮೂಲ ಬಿಜೆಪಿ-ವಲಸಿಗ ಭೇದಭಾವಕ್ಕೆ ಬೇಸತ್ತ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್. ಕಳೆದ ವಿದಾನಸಭಾ ಚುನಾವಣೆಯಲ್ಲಿ ಸೋಮಶೇಖರ್ ಸೋಲಿಗೆ ಸುಮಾರು 100 ಜನ ಸ್ಥಳೀಯ ಬಿಜೆಪಿ ಮುಖಂಡರಿಂದ ಬಿಜೆಪಿ ವಿರುದ್ಧವೇ ಕೆಲಸ ಮಾಡಿಸುವ ತಂತ್ರಗಾರಿಕೆ ಕುರಿತು ದೂರವಾಣಿ ಸಂಭಾಷಣೆ ಪವರ್ ಟಿವಿಗೆ ಸ್ಫೋಟಕ ಆಡಿಯೋ ಲಭ್ಯವಾಗಿದೆ.
ಇದನ್ನು ಓದಿ: ನಾನು ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ದ : ಸಚಿವ ಕೆ.ಹೆಚ್ ಮುನಿಯಪ್ಪ
ಈ ಆಡಿಯೋ ದಲ್ಲಿ ಯಶವಂತಪುರ ಕ್ಷೇತ್ರದ ಚಿಕ್ಕಬಿದರಕಲ್ಲು, ಕೆಂಗೇರಿ, ಹೆಮ್ಮಿಗೆಪುರ, ಉಲ್ಲಾಳದಲ್ಲಿ ಜೆಡಿಎಸ್ಗೆ ಲೀಡ್ ಕೊಡಲು ಜೆಡಿಎಸ್ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಬೇಕು, ಯಾರಿಗೂ ಗೊತ್ತಾಗದಂತೆ ಸೋಮಶೇಖರ್ ಸೋಲಿಸಬೇಕೆಂದು ರಣತಂತ್ರ ರಚನೆ ಬಗ್ಗೆ ಮೂಲ ಬಿಜೆಪಿಗರಾದ ವಿಜಯ್ ಕುಮಾರ್ ಹಾಗು ಧನಂಜಯ್ ನಡುವೆ ನಡುವೆ ಮಾತುಕತೆ ನಡೆದಿದೆ.
ತಮ್ಮ ಸೋಲಿಗೆ ಮುಹೂರ್ತ ಇಟ್ಟಿದ್ದರಿಂದ ತೀವ್ರ ಅಸಮಾಧಾನಗೊಂಡ ಸೋಮಶೇಖರ್, ಈ ಆಡಿಯೋ ವಿಚಾರ ಬಿಜೆಪಿ ವರಿಷ್ಠರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ನಾಯಕರು ತನ್ನ ವಿರುದ್ಧವೇ ಕೆಲಸ ಮಾಡಿದ್ರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ . ಇದೇ ಕಾರಣದಿಂದ ಕಾಂಗ್ರೆಸ್ ಸೇರ್ಪಡೆಗೆ ಮನಸು ಮಾಡಿದ್ರಾ ಸೋಮಶೇಖರ್ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ.