ಬೆಂಗಳೂರು : ಹಾವೇರಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆ ಹಳ್ಳ ಹಿಡಿದಿತ್ತು. ಮನೆ-ಮನೆಯಿಂದ ಕಸ ಸಂಗ್ರಹಿಸಲು ಹಾವೇರಿ ನಗರಸಭೆ ಖರೀದಿಸಿದ್ದ 32 ಸಾವಿರ ಕಸದ ಡಬ್ಬಿಗಳು ರಂಗಮಂದಿರಲ್ಲೇ ಧೂಳು ಹಿಡಿದು ಕುಳಿತಿದ್ದವು.
ಈ ಬಗ್ಗೆ ಪವರ್ ಟಿವಿ ವರದಿ ಮಾಡಿದ್ದು, ಈ ಬೆನ್ನಲ್ಲೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕಸದ ಡಬ್ಬಿಗಳನ್ನು ಉಪಸಭಾಪತಿ ರುದ್ರಪ್ಪ ಲಮಾಣಿಯವರ ನೇತೃತ್ವದಲ್ಲಿ ಹಂಚಿಕೆ ಮಾಡಿದ್ದಾರೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ 32,350 ಡಸ್ಟ್ಬಿನ್ ಖರೀದಿಸಿ ಐದಾರು ತಿಂಗಳುಗಳೇ ಕಳೆದು ಹೋಗಿತ್ತು. ಇವುಗಳ ಖರೀದಿಗಾಗಿ 46 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿತ್ತು. ನಗರದ 31 ವಾರ್ಡ್‌ಗಳಲ್ಲಿರುವ 16,175 ಮನೆಗಳಿಗೆ ಡಸ್ಟ್ಬಿನ್ ವಿತರಣೆ ಮಾಡಬೇಕಿತ್ತು. ಆದರೆ, ಮನೆಗಳಿಗೆ ಈ ಡಬ್ಬಿಗಳನ್ನು ಹಂಚದೇ ನಿರ್ಲಕ್ಷ್ಯವಹಿಸಲಾಗಿತ್ತು. ಇದೀಗ ಎಲ್ಲಾ ಡಸ್ಟ್ಬಿನ್ಗಳನ್ನು ಹಂಚಲಾಗಿದೆ.