ಬೆಂಗಳೂರು : ರಾಜ್ಯದ ಜೈಲುಗಳು ಭಯೋತ್ಪಾದನೆ ಟ್ರೈನಿಂಗ್ ಕೊಡುವ ಕೇಂದ್ರಗಳಾಗಿ ಬದಲಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಣ ಕೊಟ್ಟರೆ ಏನು ವ್ಯವಸ್ಥೆ ಬೇಕಾದರೂ ಸಿಗುತ್ತದೆ. ಅಧಿಕಾರಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ದೂರಿದ್ದಾರೆ.
ಇದು ಕೇವಲ ಹಿಂಡಲಗಾ ಜೈಲಿನಲ್ಲಿ ಮಾತ್ರ ಅಲ್ಲ, ರಾಜ್ಯದ ಬಹುತೇಕ ಎಲ್ಲಾ ಜೈಲಿನಲ್ಲಿ ಇದೇ ವ್ಯವಸ್ಥೆ ಇದೆ. ಬೆಂಗಳೂರಿನ ಜೈಲಿನಲ್ಲಿ ಕುಳಿತು ಉಗ್ರ ಚಟುವಟಿಕೆ ಕೆಲಸ ಮಾಡುತ್ತಾರೆ. ಇದಕ್ಕೆ ಸರ್ಕಾರ ಮತ್ತು ಗೃಹ ಇಲಾಖೆ ನೇರ ಕಾರಣ. ಇದನ್ನ ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಪುಕ್ಕಟೆ ಸಿದ್ದರಾಮಣ್ಣ : ಎಂ.ಟಿ ಕೃಷ್ಣಪ್ಪ
ಲಕ್ಷಾಂತರ ಹಣ ಕೊಡುವ ಪರಿಸ್ಥಿತಿ
ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಇದೆ. ಇರುವ ಹುದ್ದೆಯಲ್ಲೇ ಮುಂದುವರೆಯಲು ಲಕ್ಷಾಂತರ ಹಣ ಕೊಡುವ ಪರಿಸ್ಥಿತಿ ಇದೆ. ಪೊಲೀಸ್ ಇಲಾಖೆಯಲ್ಲಿ ಯಾವ ಠಾಣೆ ಬೇಕು ಆಯ್ಕೆ ಮಾಡಿಕೊಳ್ಳಲು ಹಣ ಕೊಡ್ತಾರ. ಶಾಸಕರೇ ಅಸಹಾಯಕರಾಗಿದ್ದಾರೆ. ಪೊಲೀಸ್ ವರ್ಗಾವಣೆ ಮಾಡಿ ತಡೆ ಹಿಡೀತಾರೆ. ಇದಕ್ಕೆ ಕಾರಣ ಭ್ರಷ್ಟಾಚಾರ. ಪೊಲೀಸ್ ಇಲಾಖೆ ವರ್ಗಾವಣೆ ಬಗ್ಗೆ ಸರ್ಕಾರ ತಡೆಯಲು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದು ಕಡೆ ಎಸ್ಸಿ, ಎಸ್ಟಿ ಹಣ ಗ್ಯಾರಂಟಿಗಳಿಗೆ ಕೊಡ್ತಾರೆ. ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಇರುವ ಅನುದಾನದಲ್ಲಿ ಕಡಿತ ಮಾಡಿದ್ದಾರೆ. ಇದು ನೇರ ಆ ವರ್ಗಗಳಿಗೆ, ಸಮಾಜಕ್ಕೆ ಮಾಡಿದ ದ್ರೋಹ ಎಂದು ಗುಡುಗಿದ್ದಾರೆ.