Sunday, November 24, 2024

‘ಮುದ್ದೆ ಚಳವಳಿ’ ಮಾಡ್ತೀವಿ, 1 ಮುದ್ದೆ 1 ರೂ.ಗೆ ಮಾರ್ತೀವಿ : ವಾಟಾಳ್ ನಾಗರಾಜ್

ಬೆಂಗಳೂರು : ಬೆಲೆ ಏರಿಕೆ ವಿರುದ್ಧ ಮುದ್ದೆ ಚಳವಳಿ ಮಾಡ್ತೀವಿ. ಬೆಲೆ ಏರಿಕೆ ವಿರುದ್ಧ ನಾಳಿದ್ದು ಪ್ರತಿಭಟನೆ ಮಾಡ್ತೀವಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇ ಅಡುಗೆ ತಯಾರಿಸಿ, ಯಾವ್ಯಾವುದು ದರ ಅಂತ ಫಿಕ್ಸ್ ಮಾಡ್ತೀವಿ. ಚೆನ್ನಾಗಿ ತಿಂತೀವಿ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೋಟೆಲ್ ನವರೂ ನಾಚುವಂತೆ ಮುದ್ದೆ, ಉಪ್ಪುಸಾರು ಮಾಡಿ ಕೊಡ್ತೀವಿ. ಒಂದು ಮುದ್ದೆ 1ರೂ. ಮಾರ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಲೆ ಏರಿಕೆ ತಡೆಯಬೇಕಿತ್ತು

ಹಾಲಿನ ದರ ಹೆಚ್ಚಳ ವಿಚಾರಕ್ಕೆ ವಾಟಾಳ್ ನಾಗರಾಜ್ ಖಂಡನೆ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆ ಯಾರೂ ನಿಯಂತ್ರಣ ಮಾಡೋರು ಇಲ್ಲ. ಹೋಟೆಲ್ ಮಾಲೀಕರು ನಾವು ಬೆಲೆ ಏರಿಸ್ತೀವಿ ಅಂತಾರೆ. ರಾಜ್ಯಾಧ್ಯಕ್ಷ, ಬೆಂಗಳೂರು ಅಧ್ಯಕ್ಷರೂ ಇದೇ ಹೇಳ್ತಾರೆ. ಬೆಲೆ ಏರಿಸಲು ಸರ್ಕಾರದ ಜೊತೆ ಪ್ರಾಮಾಣಿಕವಾಗಿ ಮಾತನಾಡಬೇಕು. ಸರ್ಕಾರ ಇವರನ್ನ ಕರೆದು ಬೆಲೆ ಏರಿಕೆ ತಡೆಯಬೇಕಿತ್ತು ಎಂದಿದ್ದಾರೆ.

ಮದ್ಯಪಾನ ಅದ್ಬುತವಾಗಿ ಹೆಚ್ಚಾಗಿದೆ

ಬೆಲೆ ಏರಿಕೆ ಎಲ್ಲಾ ರೇಟ್ ಜಾಸ್ತಿ ಆಗಿದೆ. ಕಾಫಿ, ಪೂರಿ, ಊಟ ಎಲ್ಲಾ ದರ ಹೆಚ್ಚಳ ಆಗಿದೆ. ಸಸ್ಯಹಾರ, ಮಾಂಸಹಾರ ಎಲ್ಲದರ ದರವೂ ಹೆಚ್ಚಾಗಿದೆ. ಮದ್ಯಪಾನ ಅದ್ಬುತವಾಗಿ ಹೆಚ್ಚಾಗಿದೆ. 80 ಕೋಟಿ ಇದ್ದಿದ್ದು, 100 ಕೋಟಿ ಆಗಿದೆ. ಬೇರೆ ಬೇರೆಕಡೆಯಿಂದ ನನಗೆ ಕರೆ ಮಾಡಿದ್ರು. ಎಲ್ಲಾ ಚಳವಳಿ ಮಾಡಿದ್ದೀರಿ, ನಮ್ಮ ಪರವಾಗಿ ಯಾಕೆ ಮಾಡಲಿಲ್ಲ ಅಂತ. ನಮಗೆ ಯಾಕೆ ಈ ರೀತಿ ಕೊಲ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES