ಬೆಂಗಳೂರು : ಇದು ದಲಿತರ, ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಗ್ಯಾರಂಟಿಗಳಿಂದ ಬಡವರಿಗೆ ಸಹಾಯ ಮಾಡ್ತೀವಿ ಅಂತ ಹೇಳಿ ದರ ಹೆಚ್ಚಿಸಲಾಗಿದೆ. ಒಂದು ಕೊಡುವಂತೆ ಮಾಡಿ ಅನೇಕ ಕಡೆ ಕಿತ್ತುಕೊಳ್ತಿದೆ ಎಂದು ಕಿಡಿಕಾರಿದ್ದಾರೆ.
ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಸರ್ಕಾರ ಬಳಸ್ತಿದೆ. ಇದರ ಮಧ್ಯೆ ಜನರಿಗೆ ಬೆಲೆ ಏರಿಕೆ ಹೊರೆಯನ್ನ ಹೊರಿಸಿದೆ. ಅಗತ್ಯ ವಸ್ತುಗಳ ದರ ಹೆಚ್ಚಳ ಮಾಡಲಾಗಿದೆ. ಇದು ಎಲ್ಲ ಕಡೆಯಿಂದ ಕಿತ್ತುಕೊಳ್ಳುವ ಸರ್ಕಾರ. ಇದು ಕೊಡುವ ಸರ್ಕಾರ ಅಲ್ಲ. ಸುಮಾರು 25 ರೀತಿಯ ಬೆಲೆ ಏರಿಕೆ ಮಾಡಲಾಗಿದೆ ಎಂದು ಎನ್.ರವಿಕುಮಾರ್ ಕುಟುಕಿದ್ದಾರೆ.
ರಾಜ್ಯದ #ATMSarkara ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ತಿಣುಕಾಡುತ್ತಲೇ ಎಲ್ಲದಕ್ಕೂ ಕತ್ತರಿ ಹಾಕುತ್ತಿದೆ.
ಅನುದಾನ ಕಟ್ ಮಾಡಿ ಅಭಿವೃದ್ಧಿಗೆ ಸಮಾಧಿ ತೋಡಿದ @siddaramaiah ಅವರ ಸರ್ಕಾರ, ಇದೀಗ ಪರಿಶಿಷ್ಟ ಸಮುದಾಯ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದೋಚಲು ಮುಂದಾಗಿದೆ.
ಬಾಯಿ ತೆರೆದರೆ 'ಅಹಿಂದ'… pic.twitter.com/1SxNIRX2uD
— BJP Karnataka (@BJP4Karnataka) August 1, 2023
ಅಭಿವೃದ್ಧಿಗೆ ಸಮಾಧಿ ತೋಡಿದೆ
ರಾಜ್ಯದ ಎಟಿಎಂ (ATM Sarkara) ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ತಿಣುಕಾಡುತ್ತಲೇ ಎಲ್ಲದಕ್ಕೂ ಕತ್ತರಿ ಹಾಕುತ್ತಿದೆ. ಅನುದಾನ ಕಟ್ ಮಾಡಿ ಅಭಿವೃದ್ಧಿಗೆ ಸಮಾಧಿ ತೋಡಿದ ಸಿದ್ದರಾಮಯ್ಯ ಅವರ ಸರ್ಕಾರ, ಇದೀಗ ಪರಿಶಿಷ್ಟ ಸಮುದಾಯ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದೋಚಲು ಮುಂದಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.