ಮಂಡ್ಯ : ಕೊನೆಗೂ ಮನ್ ಮುಲ್ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ತಗೋಳ್ಳೋದ್ರಲ್ಲಿ ‘ಕೈ’ ಸಕ್ಸಸ್ ಆಗಿದೆ.
ರಾಜ್ಯ ಮಟ್ಟದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಆಗ್ತಿದ್ರೆ, ಮನ್ ಮುಲ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಕಾಂಗ್ರೆಸ್ ಗೆ ಸಪೋರ್ಟ್ ಮಾಡೋ ಮೂಲಕ ಠಕ್ಕರ್ ಕೊಟ್ಟರು. ಮತ್ತೊಂದೆಡೆ, ಜೆಡಿಎಸ್ ಇಬ್ಬರು ಸದಸ್ಯರನ್ನ ಅನರ್ಹಗೊಳಿಸಿದ್ದಕ್ಕೆ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು.
ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಜೆಡಿಎಸ್ 7, ಕಾಂಗ್ರೆಸ್ 3, ಬಿಜೆಪಿ 2, ಅಧಿಕಾರಿಗಳು 5, ಒಟ್ಟು 17 ಮತಗಳಿರುವ ಮನ್ಮುಲ್ ಆಡಳಿತ ಮಂಡಳಿಯಲ್ಲಿ ಕೇವಲ 3 ಸದಸ್ಯರಿರುವ ಕಾಂಗ್ರೆಸ್, ಅಧಿಕಾರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯ್ತು. ಅಧಿಕಾರ ಹಿಡಿಯಲು ಕಾಂಗ್ರೆಸ್ ದೊಡ್ಡ ಡ್ರಾಮಾವನ್ನೆ ಸೃಷ್ಠಿ ಮಾಡಿದ್ದು ವಿಶೇಷ.
ಗೆಲ್ಲಲು 9 ಮತಗಳು ಬೇಕಾಗಿತ್ತು. ಅದಕ್ಕಾಗಿ 5 ಅಧಿಕಾರಿಗಳು 3 ಕಾಂಗ್ರೆಸ್ ಮತಗಳಿತ್ತು. ಏನಾದ್ರು ಮಾಡಿ ಗೆಲ್ಲಲೇಬೇಕೆಂದು ಪ್ಲ್ಯಾನ್ ಮಾಡಿದ ಕಾಂಗ್ರೆಸ್, ಬಿಜೆಪಿಯ ಓರ್ವ ಸದಸ್ಯ ಎಸ್.ಪಿ.ಸ್ವಾಮಿಯನ್ನ ಸೆಳೆದು, ಕಾಂಗ್ರೆಸ್ 9 ಮತಗಳನ್ನ ಪಡೆದು ಗೆಲುವಿನ ನಗೆ ಬೀರಿತು.
ಇದನ್ನೂ ಓದಿ : ‘ಕೈ’ ಪಾಳೆಯದಲ್ಲಿ ಶುರುವಾಯ್ತು ಮೂಲ V/s ವಲಸಿಗ ಫೈಟ್
ವಾಮ ಮಾರ್ಗ ಅನುಸರಿಸಿ ಅಧಿಕಾರ
ಈ ಮಧ್ಯೆ ಜೆಡಿಎಸ್ನ ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಕಾರಣ ನೀಡಿ ಅನರ್ಹಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಎಆರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರಲ್ಲದೆ ಕಾಂಗ್ರೆಸ್ ಅಧಿಕಾರ ಹಿಡಿಯಲು ವಾಮ ಮಾರ್ಗ ಅನುಸರಿಸಿ ನಮಗೆ ಕಾನೂನು ಬಾಹಿರವಾಗಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಕಾಂಗ್ರೆಸ್ ಗೇಮ್ ಪ್ಲ್ಯಾನ್ ವರ್ಕೌಟ್
ಚುನಾವಣೆ ಅಂದ್ಮೇಲೆ ಏನಾದ್ರೊಂದು ಗಿಮಿಕ್ ಇದ್ದೇ ಇರುತ್ತೆ. ಅದೇ ರೀತಿ ಕಾಂಗ್ರೆಸ್ ಹಾಕಿದ ಗೇಮ್ ಪ್ಲ್ಯಾನ್ ವರ್ಕೌಟ್ ಆಗಿದ್ದು ಮಾತ್ರ ಆಶ್ಚರ್ಯ. ಅದೇನಾದ್ರು ಆಗ್ಲಿ ಬಿಜೆಪಿ ಹಾಗೂ ಜೆಡಿಎಸ್ನ ರಾಜ್ಯ ನಾಯಕರು ಕಾಂಗ್ರೆಸ್ ಮೇಲೆ ಕೆಂಡ ಕಾರ್ತಿದ್ದಾರೆ. ಆದ್ರೆ, ಇಲ್ಲು ಬಿಜೆಪಿಯ ಓರ್ವ ಸದಸ್ಯ ಸದ್ದಿಲ್ಲದೆ ಕಾಂಗ್ರೆಸ್ಗೆ ಸಪೋರ್ಟ್ ಮಾಡಿದ್ದಂತು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ.