ಬೆಂಗಳೂರು : ‘ಸಿಎಂ ಮಾಡೋದು ಗೊತ್ತು, ಇಳಿಸೋದು ಗೊತ್ತು ‘ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೇಟು ಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ವಿಷಯ ಬಿಟ್ಟು ವಿಧಾನಸಭೆ ಅಧಿವೇಶನದ ಬಗ್ಗೆ ಮಾತನಾಡಿ ಜಾಣ್ಮೆಯ ನಡೆ ಪ್ರದರ್ಶಿಸಿದರು.
ವಿರೋಧ ಪಕ್ಷಗಳು ಆಕ್ಟಿವ್ ಆಗಿ ಪಾಟಿಸಿಪೇಟ್ ಮಾಡಬೇಕು ಅಂತ ಮೂರು ವಾರಗಳ ಕಾಲ ಅಧಿವೇಶನ ನಡೆಸಿದ್ದೆವು. ಅಧಿವೇಶನದಲ್ಲಿ ಬಂದು ಅನೇಕ ವಿಷಯಗಳ ಬಗ್ಗೆ ಮಾಡಬೇಕಿತ್ತು. ಸಾಮಾನ್ಯವಾಗಿ ಎರಡು ವಾರ ನಡೆಯುತ್ತಿತ್ತು. ಅವರು ಅಸೆಂಬ್ಲಿಗೆ ಬರದೇ ಇದ್ದರೆ ಹೇಗೆ? ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಕಾದು ನೋಡಿ.. ರಾಜಕಾರಣ ಏನೇನು ಆಗುತ್ತೆ : ಹೊಸ ಬಾಂಬ್ ಸಿಡಿಸಿದ ಹರಿಪ್ರಸಾದ್
ಅದಕ್ಕೂ ನಮಗೂ ಸಂಬಂಧ ಇಲ್ಲ
ಗಲಾಟೆ, ಗದ್ದಲದಲ್ಲೇ ಸಮಯ ವ್ಯರ್ಥ ಮಾಡಿದರೆ ಜನರಿಗೆ ಯಾವ ಸಂದೇಶ ಹೋಗಲಿದೆ? ನಾನು 40 ವರ್ಷದ ಇತಿಹಾಸದಲ್ಲಿ 14 ಬಜೆಟ್ ಮಂಡಿಸಿದ್ದೇನೆ. ಮೊದಲ ಬಾರಿಗೆ ವಿರೋಧ ಪಕ್ಷದವರು ಇಲ್ಲದೆಯೇ ಬಜೆಟ್ ಬಗ್ಗೆ ಉತ್ತರ ಕೊಟ್ಟಿರುವುದು. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸ್ಪೀಕರ್ ಕ್ರಮ ತೆಗೆದುಕೊಂಡಿದ್ದಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು.
ಸಾಲಮನ್ನಾ ಮಾಡುವಾಗ ಬೆಂಬಲಿಸಿಲ್ವಾ?
ನೈಸ್ ವಿಚಾರವಾಗಿ ಪ್ರತಿಭಟನೆಯ ವಿಚಾರ ಕುರಿತು ಮಾತನಾಡಿ, ಅವರು ಅಧಿಕಾರದಲ್ಲಿ ಇದ್ರಲ್ವಾ? ನಾವು ಹೋದ ಮೇಲೆ ಅವರು ಬಂದ್ರಲ್ವಾ? ಯಾಕೆ ಅವರು ಕ್ರಮ ತೆಗೆದುಕೊಂಡಿಲ್ಲ? ಎಂದರು. ಕಾಂಗ್ರೆಸ್ ‘ಕೈ’ ಕಟ್ಟಿ ಹಾಕಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಅದೆಲ್ಲಾ ಸುಳ್ಳು, ಸಾಲಮನ್ನಾ ಮಾಡುವಾಗ ಬೆಂಬಲಿಸಿಲ್ವಾ? ಎಂದು ಪ್ರಶ್ನಿಸಿದರು.