ನವದೆಹಲಿ : ಗೃಹ ಸಚಿವ ಡಾ.ಜಿ ಪರಮೇಶ್ವರ ಬಗ್ಗೆ ಅನುಕಂಪ ಇದೆ. ತಾವು ಸಿಎಂ ಆಗುವುದುನ್ನು ತಡೆದದ್ದು ಯಾರು ಅಂತ ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೌಂಟರ್ ಕೊಟ್ಟರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಪಕ್ಷದಲ್ಲಿ ಗೌರವ ಉಳಿಸಿಕೊಂಡಿರುವ ವ್ಯಕ್ತಿಯಾಗಿದ್ದೀರಿ. ಪಕ್ಷದ ಅಧ್ಯಕ್ಷರ ತರ ತಾವು ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕುಟುಕಿದರು.
ಬಂಧಿತರನ್ನು ಆರೋಪಿಗಳು ಅಂತ ಹೇಳಲು ಸಾಧ್ಯವಿಲ್ಲ ಎನ್ನುವ ವಿಚಾರ ಕುರಿತು ಮಾತನಾಡಿ, ಗೃಹ ಸಚಿವ ಡಾ.ಜಿ ಪರಮೇಶ್ವರ ಅವರಿಗೆ ಕೇಳಲು ಬಯಸ್ತೇನೆ. ಆರೋಪಿಗಳ ಹತ್ತಿರ ವಶಪಡಿಸಿಕೊಂಡಿರೋದು ಮಕ್ಕಳ ಆಟದ ಸಾಮಾನು ಅಲ್ಲ. ಅವರ ಬಳಿ ಭಯೋತ್ಪಾದಕ ಚಟುವಟಿಕೆಗೆ ಬಳಸುವ ವಸ್ತುಗಳು ಸೀಜ್ ಆಗಿದೆ ಎಂದು ಚಾಟಿ ಬೀಸಿದರು.
ಇದನ್ನೂ ಓದಿ : ಬೊಮ್ಮಾಯಿಯವ್ರನ್ನ ನಾನು ಅಭಿನಂದಿಸ್ತೀನಿ : ಕುಮಾರಸ್ವಾಮಿ
ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ
ಶಂಕಿತ ಭಯೋತ್ಪಾದಕರ ಪತ್ತೆ ಪ್ರಕರಣ ಸಂಬಂಧ ಮಾತನಾಡಿ, ಈಗಾಗಲೇ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ. ವಾಕಿಟಕಿ, ಸೆಟಲೈಟ್ ಫೋನ್, ಗ್ರೇನೆಡ್ ಹಲವು ಸ್ಪೋಟಕ ವಸ್ತುಗಳನ್ನು ವಶ ಪಡೆದುಕೊಳ್ಳಲಾಗಿದೆ. ಅಂತರಾಷ್ಟ್ರೀಯ ಮಟ್ಟದ ನಂಟನ್ನು ಬಂಧಿತರು ಹೊಂದಿದ್ದಾರೆ ಎಂದು ಹೇಳಿದರು.
ದೊಡ್ಡ ಪ್ರಮಾದ ಆಗ್ತಿತ್ತು
ಈ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಬೇಕಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಂಜಾಗ್ರತೆ ವಹಿಸದಿಲ್ಲದಿದ್ದಿದ್ರೆ, ಅತೀ ದೊಡ್ಡ ಪ್ರಮಾದ ಆಗ್ತಿತ್ತು ಎಂದು ಸಿ.ಟಿ ರವಿ ತಿಳಿಸಿದರು.