Monday, November 25, 2024

ನಾನು ಭಗರಂಗದಳ ಕಾರ್ಯಕರ್ತೆ.. ನನ್ನನ್ನು ಎಲ್ಲಿಗೆ ಗಡಿಪಾರು ಮಾಡ್ತೀರಿ : ಶೋಭಾ ಕರಂದ್ಲಾಜೆ ಸವಾಲ್

ನವದೆಹಲಿ : ಕಾಂಗ್ರೆಸ್ ಸರ್ಕಾರ ಭಜರಂಗದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಜರಂಗದಳದ ಕಾರ್ಯಕರ್ತರನ್ನು ಹೆದರಿಸುವಂತ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಆರ್.ಎಸ್.ಎಸ್ ಜಮೀನು ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಎಷ್ಟು ಜನರನ್ನು ಗಡಿ ಪಾಡು ಮಾಡುತ್ತೀರಿ. ನಾನು ಭಗರಂಗದಳ ಕಾರ್ಯಕರ್ತೆ. ಆರ್.ಎಸ್.ಎಸ್ ಕಾರ್ಯಕರ್ತೆ. ನನ್ನನ್ನು ಎಲ್ಲಿಗೆ ಗಡಿಪಾರು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಮಿತ್ ಶಾ ಅವರನ್ನು ಭೇಟಿಯಾದ ವಿಜಯೇಂದ್ರ

ಕಾಂಗ್ರೆಸ್ ಉಗ್ರರರನ್ನು ರಕ್ಷಣೆ ಮಾಡುತ್ತಿದೆ

ಕಾಂಗ್ರೆಸ್ ಸರ್ಕಾರ ಉಗ್ರರರನ್ನು ರಕ್ಷಣೆ ಮಾಡುತ್ತಿದೆ. ಕರ್ನಾಟಕದಲ್ಲಿ ಮತ್ತೊಂದು ಉಗ್ರಗಾಮಿ ಚಟುವಟಿಕೆ ಬಯಲಾಗಿದೆ. 2008ರ ಸರಣಿ ಸ್ಫೋಟ ನಡೆದಿತ್ತು, ಆರೋಪಿ ಜೈಲಿನಲ್ಲಿದ್ದಾನೆ. ಜಾಹಿದ್ ತರ್ಬೇಜ್ ಮನೆಯಲ್ಲಿ ನಾಲ್ಕು ಜೀವಂತ ಗ್ರಾನೈಡ್ ಸಿಕ್ಕಿವೆ. ಬಂಧಿಸಿದವರ ಬಳಿ 7 ಕಂಟ್ರಿಮೇಡ್ ಬುಲೆಟ್, ಸ್ಯಾಟಲೈಟ್ ಫೋನ್ ಸೆಟ್ ಸಿಕ್ಕಿವೆ. ಮೊಹಮ್ಮದ್ ಜುನೈದ್ ಸಾಮಗ್ರಿ ಸರಬರಾಜು ಮಾಡಿದ್ದಾನೆ ಎಂದು ಹೇಳಿದರು.

ತನಿಖೆ ದಾರಿ ತಪ್ಪಿಸುವ ವರ್ತನೆ

ಲಷ್ಕರ್ ಇ ತೋಯ್ಬಾ ಸಂಘಟನೆ ಲಿಂಕ್ ಇದೆ. ವಿದೇಶಿ ಸಂಘಟನೆಗಳ ಕೈವಾಡ ಇದೆ. ಈ ಪ್ರಕರಣವನ್ನು ಎನ್ ಐಎ ಗೆ ವಹಿಸಬೇಕು. ಎನ್ ಐಎ ಇಂದ ಮಾತ್ರ ತನಿಖೆ ಸಾಧ್ಯ. ಕರ್ನಾಟಕ ಸರ್ಕಾರ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕರ್ನಾಟಕ ಗೃಹ ಸಚಿವರು ಇವರು ಅಪರಾಧಿಗಳಲ್ಲ ಎಂದಿದ್ದಾರೆ. ತನಿಖೆಯನ್ನು ದಾರಿ ತಪ್ಪಿಸುವ ವರ್ತನೆ ಇದು ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES