Friday, November 22, 2024

ಇವ್ರು ಮಾಡ್ತಿರೋದು ರಾಜಕೀಯವೋ? ರಾಜ್ಯದ ಅಭಿವೃದ್ಧಿಯೋ? : ಕುಮಾರಸ್ವಾಮಿ ಕಿಡಿ

ಬೆಂಗಳೂರು : ಮಹಾಘಟಬಂಧನ್ ಸಭೆಗೆ ಕಾಂಗ್ರೆಸ್ ಸರ್ಕಾರ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ ಎಂದು ಕುಟುಕಿದರು.

ಒಂದು ಪಕ್ಷದ ರಾಜಕೀಯ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳ ಬಳಕೆ ಸರಿಯಲ್ಲ. ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಳ್ಳಲಾಗಿದೆ‌. ಅಧಿಕಾರಿಗಳನ್ನು ಕಳಿಸುವ ಮೂಲಕ ಕೆಟ್ಟ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಕಳೆದ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ರೈತರ ಜೀವಕ್ಕಿಂತ ಕಾಂಗ್ರೆಸ್ಸಿಗರಿಗೆ ರಾಜಕೀಯವೇ ಮುಖ್ಯ : ಬೊಮ್ಮಾಯಿ ಕಿಡಿ

ಸರ್ಕಾರ ಉತ್ತರ ಕೊಡಬೇಕು

ಕುಮಾರಸ್ವಾಮಿ ಎಲ್ಲದರಲ್ಲೂ ರಾಜಕೀಯ ಮಾಡ್ತಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ ಮಾತನಾಡಿ, ಅವರು ಇವಾಗ ಏನ್ ಮಾಡ್ತಿದ್ದಾರೆ? ಈಗ ಮಾಡ್ತಿರೋದು ರಾಜಕೀಯವೋ? ಅಥವಾ ರಾಜ್ಯದ ಅಭಿವೃದ್ಧಿಯೋ? ಅವರ ರಾಜಕೀಯ ಸಂಘಟನೆಗೆ ಹಿರಿಯ ಅಧಿಕಾರಿಗಳ ಬಳಕೆ ಮಾಡಿದ್ದಾರೆ. ಬೇರೆ ಪಕ್ಷದ ನಾಯಕರ ಸ್ವಾಗತ ಕೋರಕು ಬೇಕಿದ್ರೆ ಸಚಿವರು, ಸಂಸದರು ಹೋಗಲಿ. ಅಧಿಕಾರಿಗಳನ್ನು ಪಕ್ಷದ ಕಾರ್ಯಕರ್ತರ ರೀತಿ ಬಳಕೆ ಮಾಡಿರೋದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಗುಡುಗಿದರು.

ನಾನಿರೋದೆ ವಿರೋಧ ಪಕ್ಷದಲ್ಲಿ

ವಿಪಕ್ಷ ನಾಯಕನಾಗಲು ಹೆಚ್ಡಿಕೆ ಹೀಗೆ ಮಾತನಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಕುರಿತು ಮಾತನಾಡಿ, ನಾನಿರೋದೆ ವಿರೋಧ ಪಕ್ಷದಲ್ಲಿ. ನಮ್ಮತ್ರ ಇರೋದು ಕೇವಲ 19 ಸದಸ್ಯರು. ಬಿಜೆಪಿಯವ್ರು 65 ಸ್ಥಾನ ಗೆದ್ದಿದ್ದಾರೆ. ನನಗೂ ವಿರೋಧ ಪಕ್ಷದ ಸ್ಥಾನಕ್ಕೂ ಸಂಬಂಧ ಇಲ್ಲ ಎಂದು ಕುಮಾರಸ್ವಾಮಿ ತಿರುಗೇಟು ಕೊಟ್ಟರು.

RELATED ARTICLES

Related Articles

TRENDING ARTICLES