ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಮಹಾ ಒಗ್ಗಟ್ಟಿಗೆ ‘ಕೈ’ ಸಜ್ಜಾಗಿದ್ದು ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ಪೂರ್ವ ತಯಾರಿ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹಂಪಿಯಲ್ಲಿ ನಡೆದ ಜಿ-20 ಸಭೆ ಯಶಸ್ವಿ : ಅಮಿತಾಬ್ ಕಾಂತ್
ಜುಲೈ 17, ಸೋಮವಾರ ಮತ್ತು 18, ಮಂಗಳವಾರ, ನಡೆಯಲಿರುವ ಮಹಾಘಟಬಂಧನ್ ಮಿತ್ರ ಪಕ್ಷಗಳ ಸಭೆಗೆ ಆಗಮಿಸಲಿರುವ ಮುಖಂಡರ ವಸತಿ ಮತ್ತು ಔತಣ ಕೂಟಗಳ ಪರಿಶೀಲನೆಯನ್ನು ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 17 ರಂದು ಬೆಂಗಳೂರಿನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದಾರೆ.
ಈ ಔತಣಕೂಟದಲ್ಲಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರೇನ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯೊಂದಿಗೆ ಸಭೆಗೆ ಆಗಮಿಸುತ್ತಾರೆ ಮತ್ತು ಅವರ ಟಿಎಂಸಿ ಪ್ರತಿನಿಧಿಗಳಾಗಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ವರಿಷ್ಟರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜುಲೈ 18 ರಂದು ನಡೆಯಲಿರುವ ಸಭೆಗೆ ಹಾಜರಾಗಲಿದ್ದಾರೆ,ಆಮ್ ಆದ್ಮಿ ಪಕ್ಷವೂ ಸೇರಿದಂತೆ 24 ಪಕ್ಷಗಳಿಗೆ ಈ ಸಭೆಯಲ್ಲಿ ಭಾಗಿಯಾಗಲು ಆಹ್ವಾನಿಸಲಾಗಿದೆ.