Wednesday, May 22, 2024

ಟ್ಯಾಕ್ಸ್ ಕೊಡಿ ಅಂತ ನಾವು ನಿಮ್ಮ ಮುಂದೆ ಭಿಕ್ಷೆ ಬೇಡಬೇಕಾ? : ಶಿವಲಿಂಗೇಗೌಡ ಗುಡುಗು

ಬೆಂಗಳೂರು : ನೀವು ದೆಹಲಿ ಮಹಾರಾಜರು. ಟ್ಯಾಕ್ಸ್ ಕೊಡಿ ಅಂತ ನಾವು ನಿಮ್ಮ ಮುಂದೆ ಭಿಕ್ಷೆ ಬೇಡಬೇಕಾ? ಎಂದು ಬಿಜೆಪಿ ವಿರುದ್ಧ ಸದನದಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಗುಡುಗಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾವು ಟ್ಯಾಕ್ಸ್ ಕಟ್ಟೋದು, ಮತ್ತೆ ಭಿಕ್ಷೆ ಬೇಡೋದು. ನೀವು ಧೀಮಂತ ರಾಜರಾದ್ರಿ, ನಮ್ಮನ್ನು ಸಾಮಂತ ರಾಜರಾಗಿ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ನಾವು ಬಯಸಿದ್ದರೆ ಜಿಎಸ್ಟಿಯಿಂದ ಹೊರಗೆ ಇರಬಹುದಿತ್ತು. ಆದರೆ, ಒಕ್ಕೂಟ ವ್ಯವಸ್ಥೆಗೆ ಗೌರವ ನೀಡಬೇಕು ಅಂತ ನಾವು ಜಿಎಸ್ಟಿಗೆ ಸೇರಿದೆವು. ವಿರೋಧ ಪಕ್ಷದವರು ಭಾರಿ‌ ನಗ್ತಿದ್ದೀರಿ. ನಿಮಗೆ ಬರುವ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠವಾಗಲಿದೆ ಎಂದು ಕುಟುಕಿದರು.

ಇದನ್ನೂ ಓದಿ : ಕಾಂಗ್ರೆಸ್ ನವರೇ ಇಷ್ಟು ಆತುರ ಏಕೆ? : ಹೆಚ್.ಡಿ ಕುಮಾರಸ್ವಾಮಿ

ಅವ್ರು ಮೋದಿ ಕೇಳಿ ಫ್ರೀ ಅನೌನ್ಸ್ ಮಾಡಿದ್ರಾ?

ಬಡವರಿಗೆ ಅಕ್ಕಿ ಕೊಡೋದಕ್ಕೆ ನಿಮಗೇನು ಕಷ್ಟ? ಅಕ್ಕಿ ಕೊಡೋದ್ರಲ್ಲೂ ನೀವು ರಾಜಕಾರಣ ಮಾಡಿದ್ರಲ್ಲ? ಕೇಜ್ರಿವಾಲ್ ಏನು ಪ್ರಧಾನಿ ನರೇಂದ್ರ ಮೋದಿ ಕೇಳಿ ಫ್ರೀ ಅನೌನ್ಸ್ ಮಾಡಿದ್ರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಅಂದ್ರಲ್ಲ ಕೊಟ್ರಾ? ರಾಜ್ಯ ಸಂಕಷ್ಟಕ್ಕೆ ಸಿಲಿಕಿದಾಗ ಕೇಂದ್ರ ಸರ್ಕಾರ ನೆರವಿಗೆ ಬರಬೇಕು. ಕಳೆದ ಬಾರಿ ನೆರೆ ಹಣ ಕೇಂದ್ರದಿಂದ ಬಂತಾ? ಎಷ್ಟು ಕೋಟಿ ರಾಜ್ಯದಿಂದ ಟ್ಯಾಕ್ಸ್ ಕೇಂದ್ರಕ್ಕೆ ಹೋಯಿತು? ಎಂದು ಛೇಡಿಸಿದರು.

ಕೇಂದ್ರದ ಅನುದಾನ ವಿಷಯಕ್ಕೆ ಜಟಾಪಟಿ

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವ ಆರ್. ಅಶೋಕ್, ಸುಳ್ಳು ಹೇಳ್ಬೇಡಿ ಎಂದು ಶಿವಲಿಂಗೇಗೌಡ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಯುಪಿಎ ಸರ್ಕಾರ ಕೊಟ್ಟ 5 ಪಟ್ಡು ಹಣವನ್ನು ನಮ್ಮ ಕೇಂದ್ರ ಸರ್ಕಾರ ನೆರೆ ಪರಿಹಾರದ ಹಣ ನೀಡಿದೆ ಎಂದರು . ಈ ವೇಳೆ ಕೇಂದ್ರದ ಅನುದಾನ ವಿಷಯ ಕುರಿತು ಸದನದಲ್ಲಿ ಮತ್ತೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆಯಿತು.

RELATED ARTICLES

Related Articles

TRENDING ARTICLES